×
Ad

ಉಡುಪಿ: ಸ್ಥಿರಾಸ್ತಿ ಮಾರ್ಗಸೂಚಿ ಮೌಲ್ಯ ಪರಿಷ್ಕರಣೆ

Update: 2018-08-10 20:11 IST

ಉಡುಪಿ, ಆ.10: ಉಡುಪಿ ಉಪ ನೋಂದಣಿ ಕಚೇರಿ ವ್ಯಾಪ್ತಿಯ ಸ್ಥಿರಾಸ್ತಿ ಗಳ ಮೌಲ್ಯಗಳನ್ನು 2018-19ನೇ ವರ್ಷಕ್ಕಾಗಿ ಪರಿಷ್ಕರಿಸಲಾಗಿದ್ದು, ಪರಿಷ್ಕೃತ ಮಾರ್ಗಸೂಚಿ ಮೌಲ್ಯಗಳ ದರಪಟ್ಟಿಯನ್ನು ಸಾರ್ವಜನಿಕರ ಮಾಹಿತಿಗಾಗಿ ಉಡುಪಿ ಉಪ ನೋಂದಣಾಧಿಕಾರಿಗಳ ಕಚೇರಿ ಹಾಗೂ ತಹಶೀಲ್ದಾರರ ತಾಲೂಕು ಕಚೇರಿಯ ಸೂಚನಾ ಫಲಕದಲ್ಲಿ ಪ್ರಕಟಿಸಲಾಗಿದೆ.

ಈ ದರಪಟ್ಟಿಯ ಬಗ್ಗೆ ಯಾವುದೇ ಆಕ್ಷೇಪಣೆಗಳಿದ್ದಲ್ಲಿ ಸಾರ್ವಜನಿಕರು 15 ದಿನಗಳ ಒಳಗೆ ಉಪನೋಂದಣಾಧಿಕಾರಿ ಉಡುಪಿ ಅಥವಾ ತಾಲೂಕು ಕಛೇರಿ ಉಡುಪಿ ಇಲ್ಲಿ ಸಲ್ಲಿಸಬಹುದು ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News