×
Ad

ಪತ್ತೀಸ್‌ಗ್ಯಾಂಗ್ ಕರಾವಳಿಯಾದ್ಯಂತ ತೆರೆಗೆ

Update: 2018-08-10 20:55 IST

ಮಂಗಳೂರು, ಆ.10: ಇನ್‌ಬಾಕ್ಸ್ ಕ್ರಿಯೇಟಿವ್ಸ್ ಲಾಂಛನದಲ್ಲಿ ತಯಾರಾದ ಮನೋಜ್ ಕುಮಾರ್ ಗರೋಡಿ ಸ್ಟೀಲ್ಸ್ ಪ್ರಸ್ತುತ ಪಡಿಸಿರುವ ಸೂರಜ್ ಬೋಳಾರ್ ನಿರ್ದೇಶನದ ‘ಪತ್ತೀಸ್‌ಗ್ಯಾಂಗ್’ ತುಳು ಸಿನಿಮಾದ ಪ್ರೀಮಿಯರ್ ಶೋ ಮತ್ತು ಬಿಡುಗಡೆ ಕಾರ್ಯಕ್ರಮವು ಶುಕ್ರವಾರ ನಗರದ ಪಾಂಡೇಶ್ವರದಲ್ಲಿ ಜರುಗಿತು.

ಶ್ರೀದೇವಿ ವಿದ್ಯಾಸಂಸ್ಥೆಯ ಅಧ್ಯಕ್ಷ ಎ. ಸದಾನಂದ ಶೆಟ್ಟಿ ಕಾರ್ಯಕ್ರಮ ಉದ್ಘಾಟಿಸಿ ಶುಭ ಹಾರೈಸಿದರು. ಮುಖ್ಯ ಅತಿಥಿಗಳಾಗಿ ಪೊಲೀಸ್ ಕಮಿಷನರ್ ಟಿ.ಆರ್. ಸುರೇಶ್, ಶಾಸಕರಾದ ಉಮಾನಾಥ ಎ. ಕೋಟ್ಯಾನ್,ಡಾ. ವೈ ಭರತ್ ಶೆಟ್ಟಿ, ಮೇಯರ್ ಭಾಸ್ಕರ್ ಕೆ., ಎಸ್‌ಡಿಸಿಸಿ ಬ್ಯಾಂಕ್‌ನ ನಿರ್ದೇಶಕ ಭಾಸ್ಕರ ಕೋಟ್ಯಾನ್, ಗರೋಡಿ ಬ್ರಹ್ಮಬೈದರ್ಕಳ ದೇವಸ್ಥಾನದ ಕೆ. ಚಿತ್ತರಂಜನ್, ಎಸ್. ಹೇಮಾಜಿ ನಾಕ್ ಭಾಗವಹಿಸಿದ್ದರು.

ಸಿನಿಮಾ ನಿರ್ಮಾಪಕ ಮನೋಜ್ ಕುಮಾರ್, ಸಂಗೀತ ನಿರ್ದೇಶಕ ಮಣಿಕಾಂತ್ ಕದ್ರಿ, ವಿಸ್ಮಯ ನಾಯಕ್, ಮೋಹನ್ ಶೇಣಿ, ಅಜೇಯರಾಜ್, ನವ್ಯತಾ ರೈ, ಚಂದ್ರಹಾಸ್ ಉಳ್ಳಾಲ್ ಪಾಲ್ಗೊಂಡಿದ್ದರು. ಸಹ ನಿರ್ಮಾಪಕ ಪ್ರೀತಮ್ ಎಂ.ಎನ್. ಕಾರ್ಯಕ್ರಮ ನಿರೂಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News