ಎಸ್‌ಡಿಪಿಐ ಅಡ್ಡೂರು ಗ್ರಾಮ ಸಮಿತಿಯಿಂದ ಶ್ರಮದಾನ
Update: 2018-08-10 21:04 IST
ಮಂಗಳೂರು, ಆ.10: ನಗರ ಹೊರವಲಯದ ಅಡ್ಡೂರು ಕೂಸಿರಡಿ ಕಾಲುದಾರಿಯನ್ನು ಅಡ್ಡೂರು ಎಸ್‌ಡಿಪಿಐ ಗ್ರಾಮ ಸಮಿತಿಯಿಂದ ದುರಸ್ತಿಗೊಳಿಸಲಾಯಿತು.
ಶ್ರಮದಾನ ಕಾರ್ಯಕ್ರಮದಲ್ಲಿ ಎಸ್‌ಡಿಪಿಐ ಅಡ್ಡೂರು ವಲಯದ ಅಧ್ಯಕ್ಷ ಝೈನುದ್ದೀನ್ ಪಾಂಡೇಲ್, ಎಸ್‌ಡಿಪಿಐ ಅಡ್ಡೂರು ಗ್ರಾಮ ಸಮಿತಿ ಅಧ್ಯಕ್ಷ ಮುಸ್ತಾಕ್ ಅಡ್ಡೂರು ಹಾಗೂ ಉಪಾಧ್ಯಕ್ಷ ನೌಷದ್ ಅಂಗಡಿಮನೆ, ಪಿಎಫ್‌ಐ ಅಡ್ಡೂರು ಘಟಕದ ಅಧ್ಯಕ್ಷ ಹಕೀಮ್ ಪಾಂಡೇಲ್ ಮತ್ತು ಶರೀಫ್ ಅಗರ್ ಉಪಸ್ಥಿತರಿದ್ದರು.