ಬಾಳ್ತಿಲ ಗ್ರಾಮದಲ್ಲಿ ಗೆ ಸ್ವಚ್ಛತಾ ಅಂದೋಲನಕ್ಕೆ ಚಾಲನೆ
Update: 2018-08-10 21:07 IST
ಬಂಟ್ವಾಳ, ಆ. 10: ಕಲ್ಲಡ್ಕ ಸಮೀಪದ ಬಾಳ್ತಿಲ ಗ್ರಾಮ ಪೂರ್ಲಿಪಾಡಿ ಅಂಗನವಾಡಿ ಕೇಂದ್ರದಲ್ಲಿ ಬಾಳ್ತಿಲ ಗ್ರಾಪಂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಬಾಲವಿಕಾಸ ಸಮಿತಿ ಹಾಗೂ ಸ್ತ್ರೀ ಶಕ್ತಿ ಸ್ವಸಹಾಯ ಗುಂಪು ಇವರ ಸಹಯೋಗದೊಂದಿಗೆ ಸ್ವಚ್ಛತಾ ಅಂದೋಲನಕ್ಕೆ ಮಾಜಿ ಜಿಪಂ ಸದಸ್ಯ ಚೆನ್ನಪ್ಪ ಆರ್ ಕೋಟ್ಯಾನ್ ಅವರು ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಬಾಳ್ತಿಲ ಗ್ರಾಪಂ ಅಧ್ಯಕ್ಷ ವಿಠಲ ನಾಯ್ಕ, ಮಾಜಿ ಗ್ರಾಪಂ ಅಧ್ಯಕ್ಷ ಬಿ.ಕೆ.ಅಣ್ಣು ಪೂಜಾರಿ, ವಿಶ್ವ ಹಿಂದೂ ಪರಿಷತ್ ಅದ್ಯಕ್ಷ ಕೆ.ಕೃಷ್ಣಪ್ಪ, ಗ್ರಾಪಂ ಸದಸ್ಯರಾದ ಸುಂದರ ಸಾಲಿಯಾನ್, ಲೋಕನಾಥ ಏಳ್ತಿಮಾರ್, ಪ್ರಕಾಶ್ ಪೂಜಾತಿ ಕರ್ಮಾನ್, ಲೋಕಯ್ಯ, ಬಜರಂಗದಳ ಸಂಚಾಲಕ ನವೀನ್ ಮಾಪಲ, ಸುಜಿತ್ ಕುರ್ಮಾನ್, ಪ್ರಮುಖರಾದ ಈಶ್ವರ ಪೂಜಾರಿ ಭಂಡಾರ ಮನೆ, ಸಂಜೀವ ಪೂಜಾರಿ, ಮೇಲ್ವಿಚಾರಕಿ ಶಾಲಿನಿ, ಆಶಾ ಕಾರ್ಯಕರ್ತೆ ಸುಜಾತ ಹಾಗೂ ಸ್ತ್ರೀ ಶಕ್ತಿ ಸದಸ್ಯರು, ಮಕ್ಕಳ ಪೋಷಕರು, ಕಾರ್ಯಕರ್ತೆ ಮತ್ತು ಸಹಾಯಕಿ ಉಪಸ್ಥಿತರಿದ್ದರು.