ಕಾವಳಕಟ್ಟೆ ಸ.ಪ್ರೌ.ಶಾಲೆ: ಜಂತು ಹುಳ ನಿವಾರಣಾ ದಿನಾಚರಣೆ
Update: 2018-08-10 21:09 IST
ಬಂಟ್ವಾಳ, ಆ.10: ರಾಷ್ಟ್ರೀಯ ಜಂತು ಹುಳ ನಿವಾರಣೆಯ ಅಂಗವಾಗಿ ವಿಶೇಷ ಅಭಿಯಾನದ ಪ್ರಯುಕ್ತ ಜಂತು ಹುಳ ನಿವಾರಣಾ ದಿನಾಚರಣೆ ಕಾವಳಮೂಡೂರು ಗ್ರಾಮದ ಕಾವಳಕಟ್ಟೆ ಸರಕಾರಿ ಪ್ರೌಢ ಶಾಲೆಯಲ್ಲಿ ಶುಕ್ರವಾರ ನಡೆಯಿತು.
ಮಾರ್ಗದರ್ಶಿ ಶಿಕ್ಷಕಿ ಜ್ಯೋತಿ ಅವರು ಜಂತು ಹುಳ ಸೋಂಕಿನಿಂದ ಉಂಟಾಗುವ ಅನಾರೋಗ್ಯದ ಬಗ್ಗೆ ಮತ್ತು ನಿವಾರಣಾ ಮಾತ್ರೆಯ ಬಗ್ಗೆ ಮಾಹಿತಿ ನೀಡಿದರು. ಮಧ್ಯಾಹ್ನದ ಊಟದ ಬಳಿಕ ಎಲ್ಲ ವಿದ್ಯಾರ್ಥಿಗಳಿಗೆ ಜಂತು ಹುಳ ಮಾತ್ರೆ ನೀಡಲಾಯಿತು.
ಮುಖ್ಯ ಶಿಕ್ಷಕಿ ಪುಷ್ಪಲತಾ, ಆರೋಗ್ಯ ಕಾರ್ಯಕರ್ತೆ ಭವಿತಾ, ಆಶಾ ಕಾರ್ಯಕರ್ತೆ ಶಾರದಾ ಮತ್ತು ಶಿಕ್ಷಕ ವೃಂದ ಉಪಸ್ಥಿತರಿದ್ದರು.