ಮುಸ್ಲಿಮ್ ವ್ಯಕ್ತಿಯ ವಿವಾಹವಾದ ಹಿಂದೂ ಮಹಿಳೆಯ ಶ್ರಾದ್ಧಕ್ಕೆ ನಿರಾಕರಿಸಿದ ದೇವಾಲಯ

Update: 2018-08-10 16:04 GMT

ಹೊಸದಿಲ್ಲಿ, ಆ. 10: ನಿಧನರಾದ ತನ್ನ ಹಿಂದೂ ಪತ್ನಿಯ ಶ್ರಾದ್ಧ ನಡೆಸಲು ಬಯಸಿದ ಮುಸ್ಲಿಂ ಪತಿಗೆ ತಾನು ವಾಸ್ತವ್ಯವಿರುವ ಬೆಂಗಾಳಿ ಪ್ರಾಬಲ್ಯದ ಪ್ರದೇಶದಲ್ಲಿರುವ ದೇವಾಲಯ ಸೊಸೈಟಿಯಲ್ಲಿ ಅವಕಾಶ ನೀಡದ ಘಟನೆ ಹೊಸದಿಲ್ಲಿಯಲ್ಲಿ ನಡೆದಿದೆ.

ಮುಸ್ಲಿಂನನ್ನು ವಿವಾಹದ ಬಳಿಕ ಅವರು ಹಿಂದೂ ಅಲ್ಲ ಎಂದು ಪ್ರತಿಪಾದಿಸಿರುವ ದೇವಾಲಯ ಸೊಸೈಟಿ ಮಹಿಳೆಯ ಶ್ರಾದ್ಧ ನಡೆಸಲು ಅವಕಾಶ ನೀಡಿಲ್ಲ. ಕೋಲ್ಕತ್ತಾ ಮೂಲದ ಇಮ್ತಿಯಾಝ ರ್ರಹ್ಮಾನ್ ಹಾಗೂ ನಿವೇದಿತಾ ಘಾತಕ್ 20 ವರ್ಷಗಳ ಹಿಂದೆ ವಿಶೇಷ ವಿವಾಹ ಕಾಯ್ದೆ ಅಡಿಯಲ್ಲಿ ವಿವಾಹವಾಗಿದ್ದರು. ನಿವೇದಿತ ಘಾತಕ್ ಕಳೆದ ವಾರ ಬಹು ಅಂಗ ವೈಫಲ್ಯದಿಂದ ಹೊಸದಿಲ್ಲಿಯಲ್ಲಿ ನಿಧನರಾಗಿದ್ದರು. ಘಾತಕ್ ಅವರ ಅಂತ್ಯ ಕ್ರಿಯೆಯನ್ನು ಹಿಂದೂ ಸಂಪ್ರದಾಯದ ಪ್ರಕಾರ ದಿಲ್ಲಿಯ ನಿಗಮ್ ಬೋಧ್ ಘಾಟ್‌ನಲ್ಲಿ ನಡೆಸಲಾಗಿತ್ತು. ಆದರೆ, ಶ್ರಾದ್ಧ ನಡೆಸಿರಲಿಲ್ಲ.

ಆಗಸ್ಟ್ 12ರಂದು ಶ್ರಾದ್ಧ ನಡೆಸಲು ಚಿತ್ತರಂಜನ್ ಪಾರ್ಕ್‌ನಲ್ಲಿರುವ ಬೆಂಗಾಳಿ ಪ್ರಾಬಲ್ಯದ ಕಾಳಿ ಮಂದಿರ ಸೊಸೈಟಿಯಲ್ಲಿ 1300 ರೂ. ನೀಡಿ ಮುಂಗಡ ಕಾಯ್ದಿರಿಸಿದ್ದೆ. ಆದರೆ, ಅನಂತರ ತನ್ನ ಮುಂಗಡ ಕಾಯ್ದಿರಿಸುವಿಕೆ ರದ್ದುಗೊಳಿಸಲಾಗಿದೆ ಎಂದು ದೇವಾಲಯ ಸೊಸೈಟಿ ತಿಳಿಸಿತ್ತು ಎಂದು ಪಶ್ಚಿಮಬಂಗಾಳ ಸರಕಾರದ ವಾಣಿಜ್ಯ ತೆರಿಗೆ ಇಲಾಖೆಯ ಉಪ ಆಯುಕ್ತರಾಗಿರುವ ರೆಹ್ಮಾನ್ ತಿಳಿಸಿದ್ದಾರೆ. ಒಂದಕ್ಕಿಂತ ಹೆಚ್ಚಿನ ಕಾರಣಕ್ಕಾಗಿ ರೆಹ್ಮಾನ್ ಅವರ ಮನವಿಯನ್ನು ಸ್ವೀಕರಿಸಲು ಸಾಧ್ಯವಾಗಿಲ್ಲ ಎಂದು ದೇವಾಲಯ ಸೊಸೈಟಿಯ ಅಶಿತಾವ್ ಭೌಮಿಕ್ ತಿಳಿಸಿದ್ದಾರೆ. ರೆಹ್ಮಾನ್ ಅವರು ತಮ್ಮ ಗುರುತುನ್ನು ಬಹಿರಂಗಪಡಿಸಿರಲಿಲ್ಲ ಹಾಗೂ ಅವರ ಪುತ್ರಿ ಇಹಿನಿ ಅಂಬ್ರೀನ್ ಹೆಸರಲ್ಲಿ ಮುಂಗಡ ಕಾಯ್ದಿರಿಸಿದ್ದರು. ಅರ್ಚಕರಿಗೆ ಅನುಮಾನ ಬಂದು ಗೋತ್ರ ಕೇಳಿದಾಗ ನಮಗೆ ಅವರ ಧರ್ಮದ ಬಗ್ಗೆ ತಿಳಿಯಿತು ಎಂದು ಭೌಮಿಕ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News