×
Ad

ಮುಡಿಪು ಎಜ್ಯುಪಾರ್ಕ್‌ನಲ್ಲಿ ಸಖಾಫಿಯ್ಯ ರಾತಿಬ್ ಮಜ್ಲಿಸ್

Update: 2018-08-11 20:32 IST

ಕೊಣಾಜೆ, ಆ. 11: ಮಜ್ಲೀಸ್ ಎಜ್ಯುಪಾರ್ಕ್ ಮುಡಿಪುವಿನಲ್ಲಿ ಮಾಸಿಕವಾಗಿ ನಡೆಯುವ ಸಖಾಫಿಯ್ಯ ರಾತಿಬ್ ಮಜ್ಲೀಸ್ ಅಸಯ್ಯಿದ್ ಮುಹಮ್ಮದ್ ಅಶ್ರಫ್ ಅಸ್ಸಖಾಫ್ ತಂಙಳ್ ಆದೂರು ನೇತೃತ್ವದಲ್ಲಿ ಶುಕ್ರವಾರ ನಡೆಯಿತು.

ಸಂಸ್ಥೆಯ ಮ್ಯಾನೇಜರ್ ಜಲಾಲುದ್ದೀನ್ ತಂಙಳ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಗ್ರಾಮೀಣ ಪ್ರದೇಶವಾದ ಮುಡಿಪುವಿನಲ್ಲಿ ಎಜ್ಯುಪಾರ್ಕ್ ಎಂಬ ಸಂಸ್ಥೆಯನ್ನು ಪ್ರಾರಂಭಿಸುವ ಮೂಲಕ ಮುಡಿಪು ಪರಿಸರ ಧಾರ್ಮಿಕ ಹಾಗೂ ಲೌಕಿಕ ವಿದ್ಯೆಯಿಂದ ಬೆಳಗಿದೆ. ಮುಂದಿನ ದಿನಗಳಲ್ಲಿ ಉತಮವಾದ ಸೇವೆಯೊಂದಿಗೆ ಮುನ್ನಡೆಯಲಿದೆ ಎಂದು ಹೇಳಿದರು.

ಎಸ್‌ಎಂಎ ಮುಡಿಪು ವಲಯಾಧ್ಯಕ್ಷ ಅಬೂಬಕ್ಕರ್, ಮಂಞಪಾರ ಸಮೀರ್ ಸಖಾಫಿ, ನ್ಯಾಯವಾದಿ ಉಬೈದ್ ಸಖಾಫಿ, ಪುತ್ತುಬಾವ ಹಾಜಿ, ಬಾಳೆಪುಣಿ ಗ್ರಾಮ ಪಂಚಾಯಿತಿ ಉಪಾಧ್ಯಕ್ಷ ಬಶೀರ್ ಸಾಜಿಗಾರ್, ಉದ್ಯಮಿ ಮಹಮ್ಮದ್ ಸಾಲಿಮಾರ್, ಮುಹಮ್ಮದ್ ಹಾಜಿ ಪೊಯ್ಯತ್ತಬೈಲು ಉಪಸ್ಥಿತರಿದ್ದರು.

ಕಾರ್ಯದರ್ಶಿ ಎ.ಇ.ಅಬ್ದುರ್ರಹ್ಮಾನ್ ರಝ್ವಿ ಸ್ವಾಗತಿಸಿದರು. ಜಮಾಲ್ ಸಖಾಫಿ ಮುದುಂಗಾರುಕಟ್ಟೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News