×
Ad

ಮಂಗಳೂರು: ಬಜಾಲ್-ನಂತೂರು-ಕಲ್ಲಕಟ್ಟೆಗೆ ಬಸ್ಸಿಗಾಗಿ ಸಚಿವರಿಗೆ ಮನವಿ

Update: 2018-08-11 20:36 IST

ಮಂಗಳೂರು, ಆ. 11: ಬಜಾಲ್ ಫೈಸಲ್ ನಗರದಿಂದ ಬಜಾಲ್ ಫೈಸಲ್ ಕಲ್ಲಕಟ್ಟೆ ಬಸ್ಸ್ ನಿಲ್ದಾಣದವರೆಗೆ ಕೆಎಸ್ಸಾರ್ಟಿಸಿ ಬಸ್ಸು ಪ್ರಯಾಣ ಮುಂದುವರಿಸಲು ಅಧಿಕಾರಿಗಳಿಗೆ ಜೆಡಿಎಸ್ ದಕ್ಷಿಣ ಕನ್ನಡ ವಿಧಾನಸಭಾ ಕ್ಷೇತ್ರದಿಂದ ಮನವಿ ಸಲ್ಲಿಸಲಾಗಿದೆ.

ಈ ಬಗ್ಗೆ ಕೂಡಲೇ ಕ್ರಮ ಕೈ ಗೊಳ್ಳುವಂತೆ ಸಾರಿಗೆ ಸಚಿವರಾದ ಡಿ.ಸಿ ತಮ್ಮಣ್ಣನವರಿಗೆ ಜೆಡಿಎಸ್ ನಿಯೋಗ ಜಿಲ್ಲಾ ವಕ್ತಾರ ಸುಶೀಲ್ ನೊರೊನ್ಹಾ ಮುಂದಾಳತ್ವದಲ್ಲಿ ಮನವಿ ನೀಡಲಾಯಿತು.

ಮನವಿಗೆ ತಕ್ಷಣ ಸ್ಪಂದಿಸಿದ ಸಚಿವರು ಕೂಡಲೇ ಕ್ರಮ ಕೈಗೊಳ್ಳುವಂತೆ ಕೆಎಸ್ಸಾರ್ಟಿಸಿ  ವಿಭಾಗ ಅಧಿಕಾರಿಗಳಿಗೆ ಆದೇಶವನ್ನು ನೀಡಿದರು. ನಿಯೋಗದಲ್ಲಿ ಯುವ ಜನತಾ ದಳದ ನಾಯಕರಾದ ಅಕ್ಷಿತ್ ಸುವರ್ಣ, ಶ್ರೀನಾಥ್ ರೈ, ರತ್ನಾಕರ ಸುವರ್ಣ, ಮಧುಸೂಧನ್ ಗೌಡ, ವಕೀಲರಾದ ಶ್ರೀ ರಘುನಾಥ್, ರಝಾಕ್, ಆಸಿಫ್, ಬಜಾಲ್ ವಾರ್ಡಿನ ನಾಯಕರಾದ ಇಝಾ, ಬಜಾಲ್ ಆರಿಫ್, ಯಾಕೋಬ್ ಮುಂತಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News