×
Ad

ಮಣಿಪಾಲ: ಆ.12ರಂದು ಸಸ್ಯೋತ್ಸವ

Update: 2018-08-11 21:26 IST

ಮಣಿಪಾಲ, ಆ.11: ಮಣಿಪಾಲ ಈಶ್ವರನಗರದ ಸ್ನೇಹಸಂಗಮದ ಆಶ್ರಯದಲ್ಲಿ ಮತ್ತು ಉಪವನ ಗಾರ್ಡನ್ಸ್ ಇಂದ್ರಾಳಿ ಇವರ ಸಹಯೋಗದಲ್ಲಿ ನಾಳೆ ಆ.12ರಂದು ಉಚಿತ ಕಸಿ ಗಿಡಗಳ ವಿತರಣಾ ಕಾರ್ಯಕ್ರಮ ಸಸ್ಯೋತ್ಸವ ಹಾಗು ಕಸಿ ಕಟ್ಟುವ ವಿಧಾನದ ಬಗ್ಗೆ ಕಾರ್ಯಾಗಾರಗಳು ಈಶ್ವರನಗರ ಬಸ್ ನಿಲ್ದಾಣದ ಸಮೀಪದ ನಡೆಯಲಿದೆ.

 ಇಲ್ಲಿ ಎಲ್ಲ ವಿಧದ ಹಣ್ಣುಹಂಪಲುಗಳ, ಹೂವಿನ ಗಿಡಗಳ ಹಾಗು ಅರಣ್ಯ ಇಲಾಖೆಯ ಸಸಿಗಳನ್ನು ಸಾರ್ವಜನಿಕರಿಗೆ ಉಚಿತವಾಗಿ ನೀಡಲಾಗುವುದು. ಕಾರ್ಯಕ್ರಮದ ಉದ್ಘಾಟನೆ ಬೆಳಗ್ಗೆ 9 ಗಂಟೆಗೆ ನಡೆಯಲಿದೆ. ಆಸಕ್ತರು ಇದರಲ್ಲಿ ಭಾಗವಹಿಸಿ ತಮಗೆ ಬೇಕಾದ ಗಿಡಗಳನ್ನು ಪಡೆದು ಕೊಳ್ಳಬಹುದು ಎಂದು ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ ಮಹೇಶ್ ಠಾಕೂರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News