×
Ad

‘ಪರಿಸರ ವಿರೋಧಿ ಚಟುವಟಿಕೆ ಮಾನವನ ವಿನಾಶಕ್ಕೆ ನಾಂದಿ’ -ಪ್ರೊ.ಎ.ಪಿ.ಭಟ್

Update: 2018-08-11 21:39 IST

ಉಡುಪಿ, ಆ.11: ಪ್ರಕೃತಿ ನೀಡಿರುವ ಶ್ರೇಷ್ಠ ಕೊಡುಗೆಗಳ ಮಿತಿಮೀರಿದ ಬಳಕೆಯಿಂದ ಮಾನವ ತನ್ನ ವಿನಾಶಕ್ಕೆ ತಾನೇ ಭಾಷ್ಯ ಬರೆಯುತ್ತಿದ್ದಾನೆ. ಅಭಿವೃದ್ಧಿ ಮಂತ್ರವನ್ನು ಜಪಿಸುತ್ತಾ ಮನುಷ್ಯ ವಿನಾಶದ ಅಂಚಿನೆಡೆಗೆ ಪ್ರಯಾಣ ಬೆಳೆಸಿದ್ದಾನೆ. ವಾತಾವರಣವನ್ನು ಅವಿರತವಾಗಿ ಹಾಳುಗೆಡವುತ್ತಾ, ಅಪರಿಮಿತ ಪ್ರಮಾಣದಲ್ಲಿ ಇಂಗಾಲದ ಡೈಆಕ್‌ಸ್ಡನ್ನು ಆಗಸಕ್ಕೆ ಚೆಲ್ಲುತ್ತಾ ಶಬ್ದ-ವಾಯು ಮಾಲಿನ್ಯಗಳಿಂದಾಗಿ ವಿನಾಶವನ್ನು ಅಪ್ಪಿಕೊಳ್ಳುತ್ತಿದ್ದಾನೆ ಎಂದು ಪೂರ್ಣಪ್ರಜ್ಞ ಕಾಲೇಜಿನ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ಪ್ರೊ.ಎ.ಪಿ.ಭಟ್ ಕಳವಳ ವ್ಯಕ್ತಪಡಿಸಿದ್ದಾರೆ.

ಅವರು ಪೂರ್ಣಪ್ರಜ್ಞ ಇನ್‌ಸ್ಟಿಟ್ಯೂಟ್ ಆಫ್ ಮ್ಯಾನೇಜ್‌ಮೆಂಟ್ (ಪಿಐಎಂ)ನ ಇಕೋ ಕ್ಲಬ್್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊಫೆಸರ್ ಎಮಿರಿಟಸ್ ಡಾ. ಕೃಷ್ಣ ಕೊತಾಯ ಮಾತನಾಡಿ, ಶ್ರೇಷ್ಠ ಅರ್ಥಶಾಸ್ತ್ರಜ್ಞರಾದ ಪ್ರೊ. ಮೆಹಬೂಬ್ ಉಲ್ ಹಕ್ ಹಾಗೂ ಪ್ರೊ. ಅಮಾರ್ತ್ಯಸೇನ್ ಪ್ರಪಂಚಕ್ಕೆ ಒದಗಿಸಿದ ಅಭಿವೃದ್ಧಿ ಬಗೆಗಿನ ಸಿದ್ದಾಂತವನ್ನು ತಿಳಿಸಿದರು. ಅಭಿವೃದ್ಧಿಯ ಹೆಸರಿನಲ್ಲಿ ದೇಶದಲ್ಲಿ ನಡೆಯುತ್ತಿರುವ ಆನಾಹುತಗಳ ಕುರಿತು ಸೋದಾಹರಣ ವಾಗಿ ಚರ್ಚಿಸಿ, ಭೂತಾನ್ ದೇಶದಂತಹ ಪರಿಸರ ಸ್ನೇಹಿ ವಾತಾವರಣ ಜಗತ್ತನ್ನು ರಕ್ಷಿಸಬಹುದು ಎಂದು ಅಭಿಪ್ರಾಯಪಟ್ಟರು.

ಪಿಐಎಂನ ನಿರ್ದೇಶಕ ಡಾ. ಭರತ್ ವಿ. ಅಧ್ಯಕ್ಷತೆ ವಹಿಸಿದ್ದರು. ಮಹಿು ಸ್ವಾಗತಿಸಿ, ಕ್ರೃತಿಕಾ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News