ಉಡುಪಿ ನಗರಸಭಾ ಚುನಾವಣೆಗೆ ಕಾಂಗ್ರೆಸ್‌ನ ಮೊದಲ ಪಟ್ಟಿ ಪ್ರಕಟ
ಉಡುಪಿ, ಆ.11: ಉಡುಪಿ ನಗರಸಭೆಗೆ ಆ.29ರಂದು ನಡೆಯುವ ಚುನಾವಣೆಗೆ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಬಿಡುಗಡೆಗೊಳಿಸಲಾಗಿದೆ.
ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ ಅವರು ಒಪ್ಪಿಗೆ ಪಡೆದು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕೆರೆ ನಗರಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 10 ವಾರ್ಡ್‌ಗಳ ಕಾಂಗ್ರೆಸ್ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದ್ದಾರೆ.
ಪಕ್ಷ ಆರು ಮಂದಿ ಹಾಲಿ ಸದಸ್ಯರಿಗೆ ಅವರವರ ವಾರ್ಡುಗಳಲ್ಲಿ ಟಿಕೆಟ್ ನೀಡಿದೆ (ದಪ್ಪಕ್ಷರದಲ್ಲಿ ಗುರುತಿಸಿದವರು). ಕಳೆದ ಬಾರಿ ಚಿಟ್ಪಾಡಿಯಲ್ಲಿ ಸ್ಪರ್ಧಿಸಿ ಸೋತ ಚಂದ್ರಮೋಹನ್‌ಗೆ ಮತ್ತೆ ಟಿಕೇಟ್ ನೀಡಲಾಗಿದೆ. ಇನ್ನುಳಿದ ಮೂವರು ಹೊಸಬರಾಗಿದ್ದಾರೆ.
ಕೊಳ-ಆಶಾ ಚಂದ್ರಶೇಖರ್, ಕಲ್ಮಾಡಿ-ನಾರಾಯಣ ಕುಂದರ್, ಕೊಡವೂರು -ಮೀನಾಕ್ಷಿ ಮಾಧವ, ಈಶ್ವರನಗರ-ಮಿಥುನ್ ಕುಮಾರ್, ಬೈಲೂರು- ರಮೇಶ್ ಕಾಂಚನ್, ಬಡಗುಬೆಟ್ಟು-ವಿಜಯ ಪೂಜಾರಿ, ಕಿನ್ನಿಮುಲ್ಕಿ- ಅಮೃತಾ ಕೃಷ್ಣಮೂರ್ತಿ, ಶಿರಿಬೀಡು- ಶೇಖರ್ ಶೆಟ್ಟಿ, ಗುಂಡಿಬೈಲು- ರಮೇಶ್ ಪೂಜಾರಿ(ಆರ್.ಕೆ.) ಹಾಗೂ ಚಿಟ್ಪಾಡಿ- ಚಂದ್ರಮೋಹನ್.