×
Ad

ಕಾರ್ಪ್ ಬ್ಯಾಂಕ್‌ಗೆ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 85 ಕೋಟಿ ರೂ ನಿವ್ವಳ ಲಾಭಗಳಿಕೆ

Update: 2018-08-11 21:46 IST

ಮಂಗಳೂರು, ಆ.11: ಕಾರ್ಪೊರೇಶನ್ 2018-19ನೆ ಸಾಲಿನ ಆರ್ಥಿಕ ವರ್ಷದ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 85 ಕೋಟಿ ರೂಪಾಯಿ ನಿವ್ವಳ ಲಾಭ ಗಳಿಸಿದೆ .ಎಂದು ಬ್ಯಾಂಕಿನ ಪ್ರಕಟಣೆ ತಿಳಿಸಿದೆ.2017-18ರ ಸಾಲಿನಲ್ಲಿ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ಬ್ಯಾಂಕ್ 60 ಕೋಟಿ ರೂ ನಿವ್ವಳ ಲಾಭಗಳಿಸಿತ್ತು ಹಾಲಿ ವರ್ಷಕ್ಕೆ ಹೋಲಿಸಿದಾಗ ಲಾಭಗಳಿಕೆಯಲ್ಲಿ 25ಕೋಟಿ ರೂ ಹೆಚ್ಚಳವಾಗಿದೆ.

ನಿರ್ವಹಣ ಲಾಭಗಳಿಕೆಯೂ ಕಳೆದ ವರ್ಷಕ್ಕೆ ಹೋಲಿಸಿದಾಗ 916 ಕೋಟಿ ರೂಗಳಿಂದ (2018 ಪ್ರಥಮ ತ್ರೈಮಾಸಿಕ ಅವಧಿಯಲ್ಲಿ ) 1531ಕೋಟಿ ರೂಪಾಯಿಗಳಿಗೆ ಏರಿಕೆಯಾಗಿದೆ. 2017-2018ರ ನಾಲ್ಕನೆ ತ್ರೈ ಮಾಸಿಕ ಅವಧಿಯಲ್ಲಿ ಬ್ಯಾಂಕಿನ ಅರ್ಥಿಕ ವ್ಯವಹಾರ 3,03,185 ಕೋಟಿ ರೂ ದಾಖಲಾಗಿತ್ತು.

2018-19ನೆ ಸಾಲಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 2,92,828 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿದೆ.ಬ್ಯಾಂಕ್ 2017ರ ಜೂನ್ ಅಂತ್ಯಕ್ಕೆ 2,10,904 ಕೋಟಿ ರೂ ಠೇವಣಿ ಸಂಗ್ರಹಿಸಿದೆ.1,33,332 ಕೋಟಿ ರೂ ಸಾಲ ನೀಡಿದೆ.70,990 ಕೋಟಿ ರೂ ಹೂಡಿಕೆ ಮಾಡಿದೆ.

2018ರ ಮಾರ್ಚ್ 31ರ ಅಂತ್ಯಕ್ಕೆ 1,19,869 ಕೋಟಿ ರೂ ಸಾಲ ನೀಡಿದೆ. 1,83,316 ಕೋಟಿ ರೂ ಠೇವಣಿ ಸಂಗ್ರಹಿಸಿದೆ. 72,368 ಕೋಟಿ ರೂ ಹೂಡಿಕೆ ಮಾಡಿದೆ.ಜೂನ್ 30,12018ರ ಅಂತ್ಯದಲ್ಲಿ ಬ್ಯಾಂಕ್ 1,76,516 ಕೋಟಿ ರೂ ಠೇವಣಿ ಸಂಗ್ರಹಿಸಿದೆ.2,92,828 ಕೋಟಿ ರೂ ಆರ್ಥಿಕ ವ್ಯವಹಾರ ನಡೆಸಿದೆ.1,16,312 ಕೋಟಿ ರೂ ಸಾಲ ನೀಡಲಾಗಿದೆ. 60,677 ಕೋಟಿ ರೂ ಹೂಡಿಕೆ ಮಾಡಲಾಗಿದೆ.

ಜೂನ್ 2018ರ ಅಂತ್ಯದಲ್ಲಿ ಬ್ಯಾಂಕ್ 1,709 ಕೋಟಿ ವಸೂಲಾತಿ ಮಾಡುವ ಮುಲಕ ಪ್ರಗತಿ ಸಾಧಿಸಿದೆ ಎಂದು ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News