ಇಮ್ರಾನ್ ಪ್ರಮಾಣವಚನಕ್ಕೆ ಕಪಿಲ್, ಸಿಧು, ಗವಾಸ್ಕರ್‌ಗೆ ಮತ್ತೆ ಆಹ್ವಾನ

Update: 2018-08-11 17:09 GMT

 ಇಸ್ಲಾಮಾಬಾದ್, ಆ. 11: ತನ್ನ ಮೊದಲಿನ ನಿರ್ಧಾರವನ್ನು ಮರುಪರಿಶೀಲಿಸಿರುವ ಪಾಕಿಸ್ತಾನ್ ತೆಹ್ರೀಕೆ ಇನ್ಸಾಫ್ (ಪಿಟಿಐ) ಪಕ್ಷವು, ನಿರೀಕ್ಷಿತ ಪ್ರಧಾನಿ ಇಮ್ರಾನ್ ಖಾನ್‌ರ ಪ್ರಮಾಣವಚನ ಕಾರ್ಯಕ್ರಮಕ್ಕೆ ಭಾರತೀಯ ಖ್ಯಾತನಾಮರನ್ನು ಆಹ್ವಾನಿಸಲು ನಿರ್ಧರಿಸಿದೆ.

ಇಮ್ರಾನ್ ರಾಜಧಾನಿ ಇಸ್ಲಾಮಾಬಾದ್‌ನಲ್ಲಿ ಆಗಸ್ಟ್ 18ರಂದು ಪಾಕಿಸ್ತಾನದ ಪ್ರಧಾನಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪಕ್ಷದ ಹಿರಿಯ ನಾಯಕ ಸೆನೆಟರ್ ಫೈಸಲ್ ಜಾವೇದ್ ಶುಕ್ರವಾರ ಹೇಳಿದ್ದಾರೆ.

ಇಮ್ರಾನ್‌ರ ಪ್ರಮಾಣವಚನ ಸ್ವೀಕಾರ ಕಾರ್ಯಕ್ರಮಕ್ಕೆ ಅವರ ಪಕ್ಷವು ಭಾರತೀಯ ಮಾಜಿ ಕ್ರಿಕೆಟಿಗರಾದ ಕಪಿಲ್ ದೇವ್, ನವಜೋತ್ ಸಿಂಗ್ ಸಿಧು ಮತ್ತು ಸುನೀಲ್ ಗವಾಸ್ಕರ್‌ರನ್ನು ಆಹ್ವಾನಿಸಿದೆ ಎಂದು ಜಾವೇದ್ ಟ್ವೀಟ್ ಮಾಡಿದ್ದಾರೆ.

‘‘ಇಮ್ರಾನ್ ಖಾನ್ ಪಾಕಿಸ್ತಾನದ ಪ್ರಧಾನಿಯಾಗಿ ಆಗಸ್ಟ್ 18ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ’’ ಎಂದು ಅವರು ತಿಳಿಸಿದ್ದಾರೆ.

ತನ್ನ ಪ್ರಮಾಣವಚನ ಕಾರ್ಯಕ್ರಮವನ್ನು ಸರಳವಾಗಿಸುವ ಹಿನ್ನೆಲೆಯಲ್ಲಿ ಕಾರ್ಯಕ್ರಮಕ್ಕೆ ವಿದೇಶಿ ನಾಯಕರು ಮತ್ತು ಖ್ಯಾತನಾಮರನ್ನು ಆಹ್ವಾನಿಸದಿರಲು ಇಮ್ರಾನ್ ನಿರ್ಧರಿಸಿದ್ದಾರೆ ಎಂಬುದಾಗಿ ಕಳೆದ ವಾರ ಪಕ್ಷ ಹೇಳಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News