ನಾಸಾದ ಮಹತ್ವಾಕಾಂಕ್ಷೆಯ ‘ಸೂರ್ಯ ಶೋಧಕ ನೌಕೆ’ ಉಡ್ಡಯನ ಮುಂದಕ್ಕೆ

Update: 2018-08-11 17:14 GMT

 ವಾಶಿಂಗ್ಟನ್, ಆ. 11: ಅಮೆರಿಕದ ಬಾಹ್ಯಾಕಾಶ ಸಂಸ್ಥೆ ‘ನಾಸಾ’ದ ಮಹತ್ವಾಕಾಂಕ್ಷೆಯ ಸೂರ್ಯ ಶೋಧಕ ನೌಕೆ ‘ಪಾರ್ಕರ್’ ಉಡ್ಡಯನಕ್ಕೆ ಕೇವಲ ಒಂದು ನಿಮಿಷ 55 ಸೆಕಂಡ್‌ಗಳು ಬಾಕಿಯಿರುವಾಗ ವಿಘ್ನ ಎದುರಾಗಿದೆ.

ಅನಿಲ ರೂಪದ ಹೀಲಿಯಂ ವ್ಯವಸ್ಥೆಯ ‘ರೆಡ್ ಪ್ರೆಶರ್’ ಎಚ್ಚರಿಕೆ ನಂದಿ ಹೋದ ಹಿನ್ನೆಲೆಯಲ್ಲಿ, ಉಡ್ಡಯನವನ್ನು ನಿಲ್ಲಿಸುವಂತೆ ಉಡ್ಡಯನ ನಿರ್ವಾಹಕರು ಕೂಗಿದರು.

ಹೀಲಿಯಂ ಪ್ರೆಶರ್ ವ್ಯವಸ್ಥೆಯನ್ನು ಶೀಘ್ರವೇ ಸರಿಪಡಿಸಲು ಸಾಧ್ಯವಾದರೆ, ಶೋಧಕವನ್ನು ಉಡಾಯಿಸಲು ರವಿವಾರ ಇನ್ನೊಮ್ಮೆ ಪ್ರಯತ್ನಿಸಲಾಗುವುದು ಎಂದು ರಾಕೆಟ್ ನಿರ್ಮಾಣ ಸಂಸ್ಥೆ ಯುನೈಟೆಡ್ ಲಾಂಚ್ ಅಲಯನ್ಸ್ ಹೇಳಿದೆ.

1.5 ಬಿಲಿಯ ಡಾಲರ್ (ಸುಮಾರು 10,350 ಕೋಟಿ ರೂಪಾಯಿ) ವೆಚ್ಚದ ಪಾರ್ಕರ್ ಸೂರ್ಯ ಶೋಧಕ ಯೋಜನೆಯು ನಾಸಾದ ಅತ್ಯಂತ ಮಹತ್ವದ ಯೋಜನೆಗಳ ಪೈಕಿ ಒಂದಾಗಿದೆ ಎಂದು ನಾಸಾದ ವಿಜ್ಞಾನ ಯೋಜನಾ ನಿರ್ದೇಶನಾಲಯದ ಮುಖ್ಯಸ್ಥ ಥಾಮಸ್ ಝುರ್ಬುಚನ್ ಬಣ್ಣಿಸಿದ್ದಾರೆ.

ಸೂರ್ಯನ ಶಕ್ತಿಯ ಮೂಲ ಹಾಗೂ ಇತರ ಅಂಶಗಳ ಬಗ್ಗೆ ಹೆಚ್ಚಿನ ಶೋಧ ನಡೆಸುವುದು ಈ ಉಡ್ಡಯನದ ಉದ್ದೇಶವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News