×
Ad

ಎಂಆರ್‌ಪಿಎಲ್‌ಗೆ 2,224 ಕೋ.ರೂ. ಲಾಭ: ಶಶಿಶಂಕರ್

Update: 2018-08-11 23:38 IST

ಮಂಗಳೂರು, ಆ.11: ಒಎನ್‌ಜಿಸಿ ಅಂಗಸಂಸ್ಥೆಯಾದ ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್(ಎಂಆರ್‌ಪಿಎಲ್) 2017-18ನೇ ಸಾಲಿನಲ್ಲಿ 2,224 ಕೋಟಿ ರೂ. ಲಾಭ ಗಳಿಸಿದೆ. ಈ ಹಿನ್ನೆಲೆಯಲ್ಲಿ ಆಡಳಿತ ಮಂಡಳಿಯು ಶೇರು ದಾರರಿಗೆ ಶೇ 30 ಡಿವಿಡೆಂಡ್ ಘೋಷಿಸಿದೆ ಎಂದು ಒಎನ್‌ಜಿಸಿ ಅಧ್ಯಕ್ಷ ಶಶಿಶಂಕರ್ ತಿಳಿಸಿದ್ದಾರೆ.

ಎಂಆರ್‌ಪಿಎಲ್ ನಲ್ಲಿ ಶನಿವಾರ ನಡೆದ 30ನೇ ವಾರ್ಷಿಕ ಮಹಾಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಹೇಳಿದರು.

ಕಳೆದ ಮೂರು ವರ್ಷಗಳಲ್ಲಿ ಜಾಗತಿಕ ಮಟ್ಟದಲ್ಲಿ ತೈಲ ಬೆಲೆ ಏರಿಳಿತಗಳ ಹೊರತಾಗಿಯೂ ಕಂಪೆನಿ ಉತ್ತಮ ಲಾಭಗಳಿಸಿದೆ. ಪರಿಣಾಮವಾಗಿ 2017-18ನೇ ಸಾಲಿನಲ್ಲಿ ಒಟ್ಟು 526 ಕೋಟಿ ರೂ. ಡಿವಿಡೆಂಡ್ ನೀಡಲಿದೆ ಎಂದವರು ಹೇಳಿದರು.

ಕಂಪೆನಿ 2017-18ನೇ ಸಾಲಿನಲ್ಲಿ 63,067 ಕೋಟಿ ರೂ. ಆರ್ಥಿಕ ವಹಿವಾಟು ನಡೆದಿದೆ. 2016-17ನೇ ಸಾಲಿನಲ್ಲಿ 59,415 ಕೋಟಿ ರೂ. ಆರ್ಥಿಕ ವಹಿವಾಟು ನಡೆದಿದೆ ಮತ್ತು 3,644 ಕೋಟಿ ರೂ. ಲಾಭಗಳಿಸಿದೆ ಎಂದು ಶಶಿಶಂಕರ್ ತಿಳಿಸಿದ್ದಾರೆ. 2018-19ನೇ ಸಾಲಿನ ಪ್ರಥಮ ತ್ರೈಮಾಸಿಕ ಅವಧಿಯಲ್ಲಿ 362 ಕೋಟಿ ರೂ. ನಿವ್ವಳ ಲಾಭ ಗಳಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ ಕಂಪೆನಿ 234 ಕೋಟಿ ರೂ. ಲಾಭ ಗಳಿಸಿತ್ತು ಎಂದು ಶಶಿಶಂಕರ್ ತಿಳಿಸಿದ್ದಾರೆ.

2017-18ನೇ ಸಾಲಿನಲ್ಲಿ ಎಂಆರ್‌ಪಿಎಲ್ 10.30 ಕೋಟಿ ರೂ. ಮೊತ್ತವನ್ನು ಸಮುದಾಯ ಅಭಿವೃದ್ಧಿ ಯೋಜನೆಗೆ ವಿನಿಯೋಗಿಸಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಎ.ಕೆ.ಸಾಹು, ಮಂಜುಳಾ, ವಿ.ಪಿ.ಹರನ್, ಎಂಆರ್‌ಪಿಎಲ್ ಆಡಳಿತ ನಿರ್ದೇಶಕ ಎಂ.ವೆಂಕಟೇಶ್ ಮತ್ತಿತರರು ಉಪಸ್ಥಿತರಿದ್ದರು.

2020ರಲ್ಲಿ ಉಪ್ಪು ನೀರಿನಿಂದ ಸಿಹಿ ನೀರನ್ನು ಸಂಸ್ಕರಿಸುವ 600 ಕೋಟಿ ರೂ. ಯೋಜನೆ ಎಂಆರ್‌ಪಿಎಲ್‌ನಲ್ಲಿ ಪೂರ್ಣಗೊಳ್ಳಲಿದೆ .

-ಎಂ.ವೆಂಕಟೇಶ್, ಆಡಳಿತ ನಿರ್ದೇಶಕ, ಎಂಆರ್‌ಪಿಎಲ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News