ದ.ಕ. ಸ್ಥಳೀಯ ಸಂಸ್ಥೆಗಳ ಚುನಾವಣೆ ಎಸ್.ಡಿ.ಪಿ.ಐ. ಪಕ್ಷದ ಪ್ರಥಮ ಪಟ್ಟಿ ಬಿಡುಗಡೆ
ಮಂಗಳೂರು, ಆ. 12: ಆಗಸ್ಟ್ 29 ರಂದು ನಡೆಯುವ ಜಿಲ್ಲೆಯ 2 ನಗರಸಭೆ (ಉಳ್ಳಾಲ,ಪುತ್ತೂರು) ಮತ್ತು 1 ಪುರಸಭೆ (ಬಂಟ್ವಾಳ)ಯ ಚುನಾವಣೆಗೆ ಸ್ಪರ್ಧಿಸುವ ಎಸ್.ಡಿ.ಪಿ.ಐ. ಪಕ್ಷದ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ಎಸ್.ಡಿ.ಪಿ.ಐ. ದ.ಕ ಜಿಲ್ಲಾ ಅಧ್ಯಕ್ಷ ಅಥಾವುಲ್ಲಾ ಜೋಕಟ್ಟೆ ಬಂಟ್ವಾಳ ಪುರಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ 7 ವಾರ್ಡ್ ಗಳ ಅಭ್ಯರ್ಥಿಗಳ, ಪುತ್ತೂರು ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ 4 ವಾರ್ಡ್ ಗಳ ಅಭ್ಯರ್ಥಿಗಳ ಹಾಗೂ ಉಳ್ಳಾಲ ನಗರಸಭೆ ಚುನಾವಣೆಯಲ್ಲಿ ಸ್ಪರ್ಧಿಸುವ 8 ವಾರ್ಡ್ ಗಳ ಅಭ್ಯರ್ಥಿಗಳ ಮೊದಲ ಪಟ್ಟಿಯನ್ನು ರಾಜ್ಯ ಸಮಿತಿಯ ಅನುಮೋದನೆಯೊಂದಿಗೆ ಬಿಡುಗಡೆಗೊಳಿಸಿದ್ದಾರೆ.
ಬಂಟ್ವಾಳ ಪುರಸಭೆ
1. ಕೈಕಂಬ : ಬಶೀರ್ ಪಳ್ಳ
2. ಶಾಂತಿ ಅಂಗಡಿ : ಇಸಾಕ್ ಶಾಂತಿ ಅಂಗಡಿ.
3. ಪರ್ಲಿಯ : ಎಸ್.ಎಚ್.ಶಾಹುಲ್.
4. ಮದ್ದ : ಇಕ್ಬಾಲ್ ಮದ್ದ
5. ಬಂಟ್ವಾಳ : ಮೂನಿಷ್ ಅಲಿ
6. ಗೂಡಿನ ಬಳಿ 13 : ಸಂಶಾದ್ ಫಾರೂಖ್
7. ಗೂಡಿನ ಬಳಿ 14 : ಝೀನತ್ ಫೈರೋಝ್.
ಪುತ್ತೂರು ನಗರಸಭೆ
1. ಆರ್ಯಪು(ಪರ್ಲಡ್ಕ): ಅಶ್ರಫ್ ಭಾವ
2. ಬನ್ನೂರು: ಫಾತಿಮ ಝೊಹರ
3. ಚಿಕ್ಕ ಮಡ್ನೂರು: ಲತೀಫ್ ಸಾಲ್ಮರ
4. ಕೆಮ್ಮಿಂಜೆ: ಯಹ್ಯಾ
ಉಳ್ಳಾಲ ನಗರಸಭೆ
1.ಕೋಟೆಪುರ: ರುಖಿಯ ಇಕ್ಬಾಲ್.
2. ಕೋಡಿ2 : ಸುಮಯ್ಯ ನಝೀರ್.
3. ಕೋಡಿ ತೋಟ: ರಮೀಝ್.
4. ಕೆಳಗಿನ ಬೀದಿ: ಮುಶರ್ರಫ್.
5. ಮಿಲ್ಲತ್ ನಗರ: ಕಮರುನ್ನೀಸಾ
6. ಹಳೆಕೋಟೆ : ಝರೀನ ರವೂಫ್
7. ಖಿಲ್ರಿಯ ನಗರ್: ಜಮಾಲ್
8. ಮುಕ್ಕಚೇರಿ : ಬದ್ರುದ್ದೀನ್