×
Ad

ಬಂಟರ ಸಂಘ ಫರಂಗಿಪೇಟೆ ವಲಯ: ಬಡ ಕುಟುಂಬಗಳಿಗೆ ಗೃಹ ಭಾಗ್ಯ ಸಮರ್ಪಣೆ; ಆಟಿ ಕಲಾ ಕ್ರೀಡೋತ್ಸವ

Update: 2018-08-12 21:33 IST

ಬಂಟ್ವಾಳ, ಆ. 12: ಬಂಟರ ಸಂಘ ಫರಂಗಿಪೇಟೆ ವಲಯದಿಂದ ಬಂಟ ಸಮಾಜದ 2 ಬಡ ಕುಟುಂಬಗಳಿಗೆ ಗೃಹ ಹಸ್ತಾಂತರ ಮಾಡಿದ್ದು, ಮುಂದಿನ ದಿನಗಳಲ್ಲಿ 5 ಗೃಹ ನಿರ್ಮಾಣ ಮಾಡಿಕೊಡಲಾಗುವುದು ಎಂದು ಸಂಘದ ಅಧ್ಯಕ್ಷ ಶಶಿರಾಜ್ ಶೆಟ್ಟಿ ಕೊಳಂಬೆ ಹೇಳಿದ್ದಾರೆ.

ಬಂಟರ ಸಂಘ ಫರಂಗಿಪೇಟೆ ವಲಯದಿಂದ ಇಲ್ಲಿನ ಸೇವಾಂಜಲಿ ಸಭಾಭವನದಲ್ಲಿ ರವಿವಾರ ನಡೆದ ಗೃಹ ಭಾಗ್ಯ ಸಮರ್ಪಣೆ ಹಾಗೂ ಆಟಿ ಕಲಾ ಕ್ರೀಡೋತ್ಸವದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಸಂಸದ ನಳಿನ್ ಕುಮಾರ್ ಕಟೀಲ್ ಅವರು ಸಂಘದ ಕಾರ್ಯಕ್ಕೆ ಶುಭಹಾರೈಸಿದರು. ವಿವೇಕ್ ಶೆಟ್ಟಿ ನಗ್ರಿಗುತ್ತು ಅಧ್ಯಕ್ಷತೆ ವಹಿಸಿದ್ದರು.

ಈ ಸಂದರ್ಭದಲ್ಲಿ ಇಂಟರ್‌ನ್ಯಾಷನಲ್ ಬಂಟ್ಸ್ ವೆಲ್‌ಫೇರ್ ಟ್ರಸ್ಟ್, ಶಾಸಕ ರಾಜೇಶ್ ನಾಕ್ ಉಳಿಪ್ಪಾಡಿಗುತ್ತು, ಶಾಸಕ ಭರತ್ ಶೆಟ್ಟಿ, ಜಾಗತಿಕ ಬಂಟರ ಒಕ್ಕೂಟದ ಅಧ್ಯಕ್ಷ ಐಕಳ ಹರೀಶ್ ಶೆಟ್ಟಿ, ಪುತ್ತೂರು ಮಾಜಿ ಶಾಸಕಿ ಶಕುಂತಳಾ ಶೆಟ್ಟಿ, ಬಂಟರ ಯಾನೆ ನಾಡವರ ಮಾತೃ ಸಂಘದ ಕಾರ್ಯದರ್ಶಿ ಕಾವು ಹೇಮನಾಥ ಶೆಟ್ಟಿ, ದೇವಸ್ಯ ಅಜಿತ್ ಕುಮಾರ್ ಚೌಟ, ದೇವಸ್ಯ ರಾಜಶೇಖರ್ ಚೌಟ, ದಿನೇಶ್ ಶೆಟ್ಟಿ ಕೊಟ್ಟಿಂಜ, ಗೌರವಾಧ್ಯಕ್ಷ ವಿಠಲ ಶೆಟ್ಟಿ ನಿರೋಳ್ಬೆ, ಸದಾನಂದ ಆಳ್ವ ಕಂಪ, ಅರುಣ್‌ಕುಮಾರ್ ಶೆಟ್ಟಿ ನುಳಿಯಾಲ್‌ಗುತ್ತು, ವಿಠಲ್ ಆಳ್ವ ಗರೋಡಿ ಮನೆ, ಸಂತೋಷ್ ಗಾಂಭೀರ, ಸುಕೇಶ್ ಶೆಟ್ಟಿ ತೇವು, ಸದಾಶಿವ ಶೆಟ್ಟಿ ಕೊಟ್ಟಿಂಜ, ಮಹಿಳಾ ವಿಭಾಗದ ಅಧ್ಯಕ್ಷೆ ನಾಗರತ್ನ ರೈ, ವಸಂತ ಶೆಟ್ಟಿ ಫರಂಗಿಪೇಟೆ, ಭುವನ್ ರೈ ಸುಜೀರ್‌ಗುತ್ತು, ಜ್ಯೋತೀಂದ್ರ ಶೆಟ್ಟಿ ಮುಂಡಾಜೆಗುತ್ತು, ದೇವದಾಸ ಶೆಟ್ಟಿ ಕೊಡ್ಮಾಣ್, ಮಮತಾ ಶೆಟ್ಟಿ ಕುಂಪನಮಜಲು, ಶೈಲಜಾ ಸುಂದರ ಶೆಟ್ಟಿ ಕಲ್ಲತಡಮೆ, ಭಾರತಿ ಗಿರೀಶ್ ಶೆಟ್ಟಿ ಕುಂಪನಮಜಲು, ವಿಜಯ್ ಶೆಟ್ಟಿ, ವಾಣಿಶ್ರೀ ಶೆಟ್ಟಿ, ನಾಗಪ್ಪ ಶೆಟ್ಟಿ, ಸುನಿಲ ಬಲ್ಲಾಳ್ ಉಪಸ್ಥಿತರಿದ್ದರು.

ಸದಾನಂದ ಆಳ್ವ ಕಂಪ ಸ್ವಾಗತಿಸಿ, ಕಾರ್ಯದರ್ಶಿ ಸುಕೇಶ್ ಶೆಟ್ಟಿ ತೇವು ವಂದಿಸಿ, ಪುರುಷೋತ್ತಮ ಭಂಡಾರಿ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ಆಟಿ ಕಲಾ ಕ್ರೀಡೋತ್ಸವ ವೈಭವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಆಟಿ ವಿಶೇಷ ತಿನಸು ಖಾದ್ಯಗಳ ಪ್ರಾತ್ಯಕ್ಷಿಕೆ, ಅಂಧ ಕಲಾವಿದರಿಂದ ಸಂಗೀತ ರಸಮಂಜಲಿ, ಯುವ ಪ್ರತಿಭೆಗಳಿಂದ ಕಾಳಿ ನೃತ್ಯ ನಡೆಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News