ಆ. 15: ಮುಸ್ಲಿಂ ಸಮಾಜ ಬಂಟ್ವಾಳ ವತಿಯಿಂದ ಅಭಿನಂದನಾ ಸಮಾರಂಭ
Update: 2018-08-12 22:27 IST
ಬಂಟ್ವಾಳ, ಆ. 12: ಮುಸ್ಲಿಂ ಸಮಾಜ ಬಂಟ್ವಾಳ ಇದರ ವತಿಯಿಂದ ಅಭಿನಂದನಾ ಸಮಾರಂಭ ಹಾಗೂ ಮಾಹಿತಿ ಕಾರ್ಯಾಗಾರವು ಆ. 15ರಂದು ಸಂಜೆ 4 ಗಂಟೆಗೆ ಬಿ.ಸಿ.ರೋಡಿನ ಲಯನ್ಸ್ ಭವನದಲ್ಲಿ ನಡೆಯಲಿದೆ.
ನಗರಾಭಿವೃದ್ಧಿ ಸಚಿವ ಯು.ಟಿ.ಖಾದರ್ ಹಾಗೂ ವಿಧಾನ ಪರಿಷತ್ ಸದಸ್ಯ ಬಿ.ಎಂ. ಫಾರೂಕ್ ಅವರನ್ನು ಸಂಘದ ವತಿಯಿಂದ ಸನ್ಮಾನಿಸಲಾಗುವುದು. ಮುಸ್ಲಿಂ ಸಮಾಜ ಬಂಟ್ವಾಳ ಅಧ್ಯಕ್ಷ ಇಬ್ನು ಅಬ್ಬಾಸ್ ಅವರು ಕಾರ್ಯಕ್ರಮ ಅಧ್ಯಕ್ಷತೆ ವಹಿಸುವರು. ಗೌರವಾಧ್ಯಕ್ಷ ಬಿ.ಎಚ್.ಖಾದರ್ ಉಪಸ್ಥಿತರಿರುವರು.
"ಸ್ವಾತಂತ್ರ್ಯ ಸಂಗ್ರಾಮದಲ್ಲಿ ಮುಸ್ಲಿಮರ ಪಾತ್ರ" ಎಂಬ ವಿಷಯದ ಕುರಿತು ಮೇಲಂಗಡಿ ಖತೀಬ್ ಯೂಸುಫ್ ಮಿಸ್ಬಾಹಿ ಹಾಗೂ ಲೇಖಕ ಇಸ್ಮಾತ್ ಫಜೀರ್ ಅವರು ಮಾಹಿತಿ ನೀಡುವರು ಎಂದು ಸಂಘದ ಪ್ರಕಟನೆ ತಿಳಿಸಿದೆ.