×
Ad

ಬೆಳ್ತಂಗಡಿ: ತುಂಬಿ ಹರಿಯುತಿದ್ದ ತೋಡಿಗೆ ಬಿದ್ದು ವೃದ್ಧ ನಾಪತ್ತೆ

Update: 2018-08-12 23:12 IST

ಬೆಳ್ತಂಗಡಿ, ಆ. 12: ನಿರಂತರವಾಗಿ ಸುರಿಯುತ್ತಿರುವ ಭಾರೀ ಮಳೆಯಿಂದ ತುಂಬಿ ಹರಿಯುತಿದ್ದ ತೋಡಿಗೆ ಬಿದ್ದು ವೃದ್ಧ ನಾಪತ್ತೆಯಾದ ಘಟನೆ ವೇಣೂರು ಸಮೀಪ ಮರೋಡಿ ಗ್ರಾಮದಲ್ಲಿ ನಡೆದಿದೆ.

ಕಂಬಳದಡ್ಡ ನಿವಾಸಿ ಬೊಮ್ಮಯ್ಯ ದಾಸ್ (65) ನಾಪತ್ತೆಯಾದವರು ಎಂದು ಗುರುತಿಸಲಾಗಿದೆ. 

ಅವರು ರವಿವಾರ ಮನೆಯಿಂದ ಪೇಟೆಗೆ ಹೋದವರು ಸಂಜೆಯ ವೇಳೆ ಮನೆಗೆ ಹಿಂತಿರುಗುತ್ತಿದ್ದ ವೇಳೆ ಮನೆಯ ಸಮೀಪವೇ ಇರುವ ಕಾಲು ಸಂಕವೊಂದನ್ನು ದಾಟುತ್ತಿದ್ದ ವೇಳೆ ತುಂಬಿ ಹರಿಯುತ್ತಿದ್ದ ತೋಡಿಗೆ ಆಕಸ್ಮಿಕವಾಗಿ ಬಿದ್ದು ನಂತರ ನಾಪತ್ತೆಯಾಗಿದ್ದಾರೆ.

ಅಗ್ನಿಶಾಮಕ ದಳದವರು ಹಾಗೂ ಸ್ಥಳೀಯರು ಸೇರಿ ಹುಡುಕಾಟ ನಡೆಸಿದರೂ ಯಾವುದೇ ಪ್ರಯೋಜನವಾಗಿಲ್ಲ. ತೊರೆ ಅಲ್ಲಿಯೇ ಸಮೀಪ ಹರಿಯುತ್ತಿರುವ ಫಲ್ಗುಣಿ ನದಿಗೆ ಸೇರುತ್ತಿದ್ದು ನೀರು ವೃದ್ದನನ್ನು ಕೊಚ್ಚಿಕೊಂಡು ಹೋಗಿರುವುದಾಗಿ ಅಂದಾಜಿಸಲಾಗಿದೆ. ವೇಣೂರು ಪೊಲೀಸರು ಹಾಗೂ ಅಗ್ನಿಶಾಮಕ ದಳದವರು ಸ್ಥಳೀಯರ ಸಹಕಾರದೊಂದಿಗೆ ಹುಡುಕಾಟ ನಡೆಸುತ್ತಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News