ಮಟ್ಕಾ ವಿರುದ್ಧ ಕಾರ್ಯಾಚರಣೆ: 24 ಪ್ರಕರಣಗಳಲ್ಲಿ 26 ಮಂದಿ ಸೆರೆ

Update: 2018-08-12 17:48 GMT

ಉಡುಪಿ, ಆ.12: ಮಟ್ಕಾ ದಂಧೆ ವಿರುದ್ಧ ಉಡುಪಿ ಜಿಲ್ಲೆಯಾದ್ಯಂತ ಕಾರ್ಯಾಚರಣೆಗೆ ಇಳಿದಿರುವ ಪೊಲೀಸರು, ಆ.11ರಂದು ಒಂದೇ ದಿನ 24 ಪ್ರಕರಣಗಳನ್ನು ದಾಖಲಿಸಿ 26 ಮಂದಿಯನ್ನು ಬಂಧಿಸಿದ್ದಾರೆ.

ಹಿರಿಯಡ್ಕ ಠಾಣಾ ವ್ಯಾಪ್ತಿಯಲ್ಲಿ ಪ್ರಕಾಶ್ ಶೆಟ್ಟಿ (44), ಪುರಂದರ(43), ಬ್ರಹ್ಮಾವರ ಠಾಣಾ ವ್ಯಾಪ್ತಿಯಲ್ಲಿ ಆನಂದ(58), ಅಜೆಕಾರು ಠಾಣಾ ವ್ಯಾಪ್ತಿಯಲ್ಲಿ ಸಂಜೀವ ಶೆರ್ವೆಗಾರ(42), ಉಡುಪಿ ಠಾಣಾ ವ್ಯಾಪ್ತಿಯಲ್ಲಿ ಅಶೋಕ್ ಎನ್.(46), ಕೊಲ್ಲೂರು ಠಾಣಾ ವ್ಯಾಪ್ತಿಯಲ್ಲಿ ಶ್ರೀಕಾಂತ(32), ರಾಘವೇಂದ್ರ(35), ಮಲ್ಪೆಠಾಣಾ ವ್ಯಾಪ್ತಿಯಲ್ಲಿ ಶರತ್, ಕಾರ್ಕಳ ನಗರ ಠಾಣಾ ವ್ಯಾಪ್ತಿಯಲ್ಲಿ ಪ್ರಕಾಶ್(42), ಕೇಶವ(45), ಗಂಗೊಳ್ಳಿ ಠಾಣಾ ವ್ಯಾಪ್ತಿ ಯಲ್ಲಿ ನಾರಾಯಣ ಮೊಗವೀರ(62), ದಾಮೋದರ ಶೇರುಗಾರ(50), ಕುಂದಾಪುರ ಠಾಣಾ ವ್ಯಾಪ್ತಿಯಲ್ಲಿ ಶಿವರಾಜ್(24), ಶಶಿಕುಮಾರ್(25), ಬೈಂದೂರು ಪೊಲೀಸ್ ಠಾಣಾ ವ್ಯಾಪ್ತಿಯ ವಿಜಯ ಶೆಟ್ಟಿ(29), ಪ್ರಕಾಶ್ ದೇವಾಡಿಗ(35), ಪಡುಬಿದ್ರಿ ಠಾಣಾ ವ್ಯಾಪ್ತಿಯಲ್ಲಿ ಮಹೇಶ್(36), ಮನೋಜ್ ಕುಮಾರ್(39), ಕರುಣಾಕರ ಪೂಜಾರಿ(45), ಶಂಕರನಾರಾ ಯಣ ಠಾಣಾ ವ್ಯಾಪ್ತಿಯಲ್ಲಿ ರಾಮ ಕುಲಾಲ್(58), ಹೆಬ್ರಿ ಠಾಣಾ ವ್ಯಾಪ್ತಿ ಯಲ್ಲಿ ಶಿವಾನಂದ ಪೂಜಾರಿ(51), ಕೋಟ ಠಾಣಾ ವ್ಯಾಪ್ತಿಯಲ್ಲಿ ಕೃಷ್ಣ ಮರಕಲ(61), ಬಾಬು ಪೂಜಾರಿ (49), ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ಶರತ್ ಕುಮಾರ್ (30), ಚೆನ್ನ ಪೂಜಾರಿ (38), ಶಿರ್ವ ಠಾಣಾ ವ್ಯಾಪ್ತಿಯಲ್ಲಿ ಶರತ್ ಶೆಟ್ಟಿ(29) ಎಂಬವರನ್ನು ಬಂಧಿಸಿ ಪ್ರಕರಣ ದಾಖಲಿಸಿ ಕೊಳ್ಳಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News