×
Ad

ರಾಷ್ಟ್ರೀಯ ಮುಕ್ತ ಕರಾಟೆ. ಸಾತ್ವಿಕ್ ಶರ್ಮಗೆ ಚಿನ್ನ, ಬೆಳ್ಳಿ ಪದಕ

Update: 2018-08-13 18:00 IST

ಪುತ್ತೂರು, ಆ. 13: ಬೆಂಗಳೂರಿನ ಕೋರಮಂಗಲ ಒಳಾಂಗಣ ಕ್ರೀಡಾಂಗಣದಲ್ಲಿ ಆ.11 ಮತ್ತು 12 ರಂದು ನಡೆದ ರಾಷ್ಟ್ರ ಮಟ್ಟದ ಕರಾಟೆ ಚಾಂಪಿಯನ್ ಷಿಪ್‌ನಲ್ಲಿ ಇನ್ಸಿಟ್ಯೂಟ್ ಆಫ್ ಕರಾಟೆ ಮತ್ತು ಮಾರ್ಷಲ್ ಆರ್ಟ್ಸ್‌ನ ಸಾತ್ವಿಕ್ ಶರ್ಮ ಬ್ಲಾಕ್ ಬೆಲ್ಟ್ 50 ಕೆಜಿ ವಿಭಾಗದ ‘ಕುಮಿಟಿ’ಯಲ್ಲಿ ಚಿನ್ನ ಹಾಗೂ 17ರ ವಯೋಮಾನದ ‘ಕಟಾ’ದಲ್ಲಿ ಬೆಳ್ಳಿ ಪದಕ ಗೆದ್ದಿರುತ್ತಾರೆ.

ಇವರು ವಿವೇಕಾನಂದ ಪ.ಪೂ. ಕಾಲೇಜ್‌ನ ವಿಜ್ಞಾನ ವಿಭಾಗದ ವಿದ್ಯಾರ್ಥಿಯಾಗಿದ್ದು, ಐಕೆಎಂಎಯ ಮುಖ್ಯ ತರಬೇತುದಾರ ಮಂಗಳೂರಿನ ಸೆನ್ಸಾಯಿ ನಿತಿನ್ ಎನ್ ಸುವರ್ಣ ಅವರಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾರೆ. ಸಾತ್ಮಿಕ್ ಸಾಲ್ಮರ ನಿವಾಸಿ ರಾಜೇಶ್ ಶರ್ಮ ಮತ್ತು ಸೀಮಾ ದಂಪತಿಯ ಪುತ್ರ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News