×
Ad

ನಗರಸಭಾ ಚುನಾವಣೆ ಬಿಜೆಪಿಗೆ 24 ಅಭ್ಯರ್ಥಿಗಳ ಪಟ್ಟಿ ಅಂತಿಮ: ಸಂಜೀವ ಮಠಂದೂರು

Update: 2018-08-13 18:06 IST

ಪುತ್ತೂರು, ಆ. 13: ಮುಂಬರುವ ನಗರಸಭಾ ಚುನಾವಣೆಗೆ 31 ವಾರ್ಡ್‌ಗಳ ಪೈಕಿ 24 ಅಭ್ಯರ್ಥಿಗಳ ಪಟ್ಟಿ ಅಂತಿಮಗೊಂಡಿದ್ದು, ಉಳಿದ 7 ಅಭ್ಯರ್ಥಿ ಗಳನ್ನು ವಾರದ ಒಳಗಾಗಿ ಅಂತಿಮಗೊಳಿಸಲಾಗುವುದು ಎಂದು ಶಾಸಕ ಸಂಜೀವ ಮಠಂದೂರು ತಿಳಿಸಿದ್ದಾರೆ.

ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ ನಗರಸಭಾ ವ್ಯಾಪ್ತಿಯ ಕಬಕ 2ನೇ ವಾರ್ಡ್‌ಗೆ ವಸಂತ, ಬನ್ನೂರು 1 ವಾರ್ಡ್‌ಗೆ ಗೌರಿ, ಬನ್ನೂರು 2 ವಾರ್ಡ್‌ಗೆ ಮೀನಾಕ್ಷಿ, ಬನ್ನೂರು 3 ವಾರ್ಡ್‌ಗೆ ಮೋಹಿನಿ, ಚಿಕ್ಕಮುಡ್ನೂರು 1 ವಾರ್ಡ್‌ಗೆ ಲೀಲಾವತಿ, ಚಿಕ್ಕಮುಡ್ನೂರು 2 ವಾರ್ಡ್‌ಗೆ ಸುಂದರ ಪೂಜಾರಿ ಬಡಾವು, ಚಿಕ್ಕಮುಡ್ನೂರು 3 ವಾರ್ಡ್‌ಗೆ ನವೀನ್ ರೈ, ಕಸಬಾ 2 ವಾರ್ಡ್‌ಗೆ ರಮೇಶ್ ರೈ ಮೊಟ್ಟೆತ್ತಡ್ಕ, ಕಸಬಾ 3 ವಾರ್ಡ್‌ಗೆ ಪದ್ಮನಾಭ ನಾಯ್ಕ, ಕಸಬಾ 4 ವಾರ್ಡ್‌ಗೆ ಪಿ.ಜಿ. ಜಗನ್ನಿವಾಸ ರಾವ್, ಕಸಬಾ 6 ವಾರ್ಡ್‌ಗೆ ಕೆ. ಸಂತೋಷ್ ಕುಮಾರ್, ಕಸಬಾ 7 ವಾರ್ಡ್‌ಗೆ ನವೀನ್ ಕುಮಾರ್, ಕಸಬಾ 9 ವಾರ್ಡ್‌ಗೆ ಯಶೋಧ ಪೂಜಾರಿ, ಕಸಬಾ 10 ವಾರ್ಡ್‌ಗೆ ವಿದ್ಯಾ ಆರ್ ಗೌರಿ, ಕಸಬಾ 11 ವಾರ್ಡ್‌ಗೆ ಅರ್ಪಣಾ ಎಸ್, ಕಸಬಾ 12 ವಾರ್ಡ್‌ಗೆ ಇಂದಿರಾ, ಕಸಬಾ 14 ವಾರ್ಡ್‌ಗೆ ಮನೋಹರ್, ಕಸಬಾ 15 ವಾರ್ಡ್‌ಗೆ ಬಾಲಚಂದ್ರ, ಕೆಮ್ಮಿಂಜೆ 1 ವಾರ್ಡ್‌ಗೆ ಬಿ. ರೋಹಿಣಿ, ಕೆಮ್ಮಿಂಜೆ 2 ವಾರ್ಡ್‌ಗೆ ಮಮತಾ ರಂಜನ್, ಕೆಮ್ಮಿಂಜೆ 3 ವಾರ್ಡ್‌ಗೆ ಬಿಂದು ಸದಾಶಿವ, ಕೆಮ್ಮಿಂಜೆ 4 ವಾರ್ಡ್‌ಗೆ ದಿನೇಶ್ ಜೈನ್, ಆರ್ಯಾಪು 2 ವಾರ್ಡ್‌ಗೆ ಶೀನಪ್ಪ ನಾಯ್ಕ ಮತ್ತು ಬಲ್ನಾಡು ವಾರ್ಡ್‌ಗೆ ಪೂರ್ಣಿಮ ಅವರನ್ನು ಅಭ್ಯರ್ಥಿಯಾಗಿ ಅಂತಿಮಗೊಳಿಸಲಾಗಿದೆ.

ಆಯ್ಕೆಗೊಂಡ ಅಭ್ಯರ್ಥಿಗಳು ಇಂದಿನಿಂದ ನಾಮಪತ್ರ ಸಲ್ಲಿಕೆ ಮಾಡಲಿದ್ದಾರೆ. ಕಾರ್ಯಕರ್ತರ ಅಪೇಕ್ಷೆಯಂತೆ ಪಕ್ಷದಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡ ವರನ್ನು ಅಭ್ಯರ್ಥಿಗಳಾಗಿ ಆಯ್ಕೆ ಮಾಡಲಾಗಿದ್ದು, ಹೆಚ್ಚಿನ ವಾರ್ಡ್‌ಗಳಿಗೆ ಹೊಸಬರಿಗೆ ಅಕಾಶ ನೀಡಲಾಗಿದೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ಚನಿಲ ತಿಮ್ಮಪ್ಪ ಶೆಟ್ಟಿ, ಮಲ್ಲಿಕಾ ಪ್ರಸಾದ್, ಜೀವಂಧರ್ ಜೈನ್, ಗೋಪಾಲಕೃಷ್ಣ ಹೇರಳೆ, ರಾಜೇಶ್ ಬನ್ನೂರು, ರಾಮದಾಸ್ ಹಾರಾಡಿ, ಕೇಶವ ಬಜತ್ತೂರು ಮತ್ತು ಚಂದ್ರಶೇಖರ ಬಪ್ಪಳಿಗೆ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News