×
Ad

ಆ.15ರಿಂದ ಹಸಿರು ಕರ್ನಾಟಕ ಅಭಿಯಾನಕ್ಕೆ ಚಾಲನೆ

Update: 2018-08-13 20:57 IST

ಉಡುಪಿ, ಆ.13: ಉಡುಪಿ ಜಿಲ್ಲೆಯಾದ್ಯಂತ ಗ್ರಾಪಂ, ಶಾಲಾ- ಕಾಲೇಜು ಗಳು, ಖಾಸಗಿ ಸಂಸ್ಥೆಗಳು, ಪೊಲೀಸ್ ಇಲಾಖಾ ಕಚೇರಿ ಮತ್ತು ವಸತಿ ಗೃಹಗಳ ಆವರಣ, ಗ್ರಾಮ ಅರಣ್ಯ ಸಮಿತಿಗಳು, ಸರಕಾರಿ ಕಚೇರಿ ಆವರಣ, ಸರಕಾರಿ ಆಸ್ಪತ್ರೆಗಳ ಆವರಣ, ಧಾರ್ಮಿಕ ಸಂಸ್ಥೆಗಳ ಆವರಣ, ಅಂಗನವಾಡಿ ಕೇಂದ್ರಗಳ ಆವರಣದ ಸರಕಾರಿ ಮತ್ತು ಖಾಸಗಿ ಲಭ್ಯ ಇರುವ ಸ್ಥಳಗಳಲ್ಲಿ ಆ.15ರಿಂದ 18ರವರೆಗೆ ಗಿಡಗಳನ್ನು ನೆಟ್ಟು ಹಸಿರು ಕರ್ನಾಟಕ ಅಭಿಯಾನ ಕಾರ್ಯಕ್ರಮ ವನ್ನು ಅನುಷ್ಟಾನಗೊಳಿಸಲು ನಿರ್ಧರಿಸಲಾಗಿದೆ.

ಈ ಕಾರ್ಯಕ್ರಮಕ್ಕೆ ಆ.15ರಂದು ಬೀಡನಗುಡ್ಡೆಯ ಮಹಾತ್ಮ ಗಾಂಧಿ ಬಯಲು ರಂಗ ಮಂದಿರದಲ್ಲಿ ಜಿಲ್ಲಾ ಉಸ್ತುವಾರಿ ಸಚಿವೆ ಜಯಮಾಲಾ ಚಾಲನೆ ನೀಡಲಿರುವರು. ಅಲ್ಲದೆ ಹಸಿರು ಕರ್ನಾಟಕ ಟ್ಯಾಬ್ಲೋವನ್ನು ಉದ್ಘಾ ಸಲಾಗುವುದು. ವಿಶೇಷ ಹಸಿರು ಕರ್ನಾಟಕ ಪಟ್ಟಿಯನ್ನು ಧರಿಸಿದ ಅರಣ್ಯ ಇಲಾಖಾ ಅಧಿಕಾರಿಗಳು ಪಥ ಸಂಚಲನ ಕಾರ್ಯಕ್ರಮವನ್ನು ನಡೆಸಿಕೊಡ ಲಿದ್ದಾರೆ.

ಇದೇ ರೀತಿ ಜಿಲ್ಲೆಯ ಎಲ್ಲಾ ತಾಲೂಕಿನಲ್ಲಿ, ಗ್ರಾಮ ಪಂಚಾಯತ್, ತಾಲೂಕು ಪಂಚಾಯತ್ ಕಚೇರಿಗಳಲ್ಲಿ ಅರಣ್ಯ ಇಲಾಖಾ ಅಧಿಕಾರಿಗಳ ಮತ್ತು ಗ್ರಾಮ ಪಂಚಾಯತ್/ ತಾಲೂಕು ಪಂಚಾಯತ್ ಅಧ್ಯಕ್ಷರುಗಳ ಉಪಸ್ಥಿತಿಯಲ್ಲಿ ಆ.15ರಂದು ಹಸಿರು ಕರ್ನಾಟಕ ಕಾರ್ಯಕ್ರಮವನ್ನು ನಡೆಸಲು ನಿರ್ಧರಿಸಲಾಗಿದೆ ಎಂದು ಕುಂದಾಪುರ ಉಪ ಅರಣ್ಯ ಸಂರಕ್ಷಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News