×
Ad

ಉಡುಪಿ ಶಿರೂರು ಮಠ ದ್ವಂದ್ವ ಮಠಕ್ಕೆ ಹಸ್ತಾಂತರ

Update: 2018-08-13 21:01 IST

ಉಡುಪಿ, ಆ.13: ಶೀರೂರು ಮಠದ ಶ್ರೀಲಕ್ಷ್ಮೀವರತೀರ್ಥ ಸ್ವಾಮೀಜಿ ಸಂಶಯಾಸ್ಪದ ಸಾವಿನ ಬಳಿಕ ತನಿಖೆ ಹಿನ್ನೆಲೆಯಲ್ಲಿ ಪೊಲೀಸ್ ವಶದಲ್ಲಿದ್ದ ಉಡುಪಿಯ ಶಿರೂರು ಮಠವನ್ನು ಇಂದು ದ್ವಂದ್ವ ಮಠವಾದ ಸೆದೆ ಮಠಕ್ಕೆ ಹಸ್ತಾಂತರಿಲಾಯಿತು.

ತನಿಖೆಯ ಉದ್ದೇಶದಿಂದ ಉಡುಪಿಯ ಮಠದಲ್ಲಿರುವ ಸ್ವಾಮೀಜಿಯ ಮಲಗುವ ಕೋಣೆ, ಅಡುಗೆ ಕೋಣೆ, ಅಭರಣ ಹಾಗೂ ದಾಖಲೆಗಳಿದ್ದ ಕೋಣೆಗಳಿಗೆ ಪೊಲೀಸ್ ಇಲಾಖೆಯಿಂದ ಬೀಗಗಳನ್ನು ಹಾಕಲಾಗಿತ್ತು. ಇದೀಗ ಉಡುಪಿ ಮಠದ ತನಿಖೆ ಪೂರ್ಣಗೊಂಡಿರುವುದರಿಂದ ಪೊಲೀಸರು ಪ್ರತಿಯೊಂದು ಕೋಣೆಗಳ ಬೀಗದ ಕೀಯನ್ನು ಸೋದೆ ಮಠದ ದಿವಾನ ಶ್ರೀನಿವಾಸ ತಂತ್ರಿ ಅವರಿಗೆ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಸೋದೆ ಶಿಕ್ಷಣ ಟ್ರಸ್ಟ್ ಕಾರ್ಯದರ್ಶಿ ರತ್ನಕುಮಾರ್, ಕೃಷ್ಣ ಮಠದ ಮುಖ್ಯಕಾರ್ಯನಿರ್ವಹಣಾಧಿಕಾರಿ ಪ್ರಹ್ಲಾದ್ ಆಚಾರ್ಯ, ಪುಂಡರೀಕಾಕ್ಷ ಭಟ್, ಮಧ್ವೇಶ ತಂತ್ರಿ ಮೊದಲಾದವರು ಹಾಜರಿದ್ದರು. ವಾರದೊಳಗೆ ಹಿರಿಯಡಕದಲ್ಲಿರುವ ಶೀರೂರು ಮೂಲ ಮಠವನ್ನು ಪೊಲೀಸ್ ಇಲಾಖೆ ಸೋದೆ ಮಠಕ್ಕೆ ಬಿಟ್ಟುಕೊಡಲಿದೆ ಎಂದು ಸೋದೆ ಮಠ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News