×
Ad

ಆ.15ರಂದು ಉಡುಪಿ ಜಿಲ್ಲಾ ಎಸ್ಸೆಸ್ಸೆಫ್‌ನಿಂದ ಆಝಾದಿ ರ್ಯಾಲಿ

Update: 2018-08-13 21:09 IST

ಉಡುಪಿ, ಆ.13: ಉಡುಪಿ ಜಿಲ್ಲಾ ಸುನ್ನೀ ಸ್ಟುಡೆಂಟ್ಸ್ ಫೆಡರೇಶನ್ ವತಿ ಯಿಂದ ‘ನಮ್ಮ್‌ಳಗಿನ ಭಾರತ ಜಾಗೃತಗೊಳ್ಳಲಿ’ ಎಂಬ ಘೋಷಣೆಯೊಂದಿಗೆ ಸ್ವಾತಂತ್ರ ದಿನಾಚರಣೆಯ ಅಂಗವಾಗಿ ಆಝಾದಿ ರ್ಯಾಲಿಯನ್ನು ಆ.15ರಂದು ಉಡುಪಿಯಲ್ಲಿ ಹಮ್ಮಿಕೊಳ್ಳಲಾಗಿದೆ.

ಮಧ್ಯಾಹ್ನ 2:30ಕ್ಕೆ ಉಡುಪಿ ಸಿಟಿ ಬಸ್ ನಿಲ್ದಾಣದ ಬಳಿಯ ಅಂಜುಮಾನ್ ಮಸೀದಿಯಿಂದ ವಿವಿಧ ಧಪ್, ಸ್ಕೌಟ್ ದಳಗಳ ವೈವಿಧ್ಯಮಯ ಆಕರ್ಷಕ ಪ್ರದರ್ಶಗಳೊಂದಿಗೆ ಹೊರಡುವ ರ್ಯಾಲಿಯು ಬ್ರಹ್ಮಗಿರಿ ಲಯನ್ಸ್ ಭವನದಲ್ಲಿ ಸಮಾಪ್ತಿಗೊಳ್ಳಲಿದೆ. ಈ ರ್ಯಾಲಿಗೆ ಎಸ್ಸೆಸ್ಸೆಫ್ ರಾಜ್ಯ ಕಾರ್ಯದರ್ಶಿ ಶಾಹುಲ್ ಹಮೀದ್ ಮುಸ್ಲಿಯಾರ್ ಶಿವಮೊಗ್ಗ ಚಾಲನೆ ನೀಡಲಿರುವರೆಂದು ಎಸ್ಸೆಸ್ಸೆಫ್ ಜಿಲ್ಲಾಧ್ಯಕ್ಷ ಅಶ್ರಫ್ ರಝಾ ಅಂಜದಿ ಸುದ್ದಿಗೋಷ್ಠಿಯಲ್ಲಿಂದು ತಿಳಿಸಿದ್ದಾರೆ.

ಸಂಜೆ 4 ಗಂಟೆಗೆ ಲಯನ್ಸ್ ಭವನದಲ್ಲಿ ನಡೆಯುವ ಪ್ರಜಾ ಸಂಗಮ ಕಾರ್ಯಕ್ರಮದಲ್ಲಿ ಜಿಲ್ಲಾ ಎಸ್‌ವೈಎಸ್ ಅಧ್ಯಕ್ಷ ಅಸ್ಸೈಯ್ಯದ್ ಜಅಫರ್ ಸ್ವಖಾಫ್ ತಂಙಳ್ ಕೋಟೇಶ್ವರ ದುವಾ ನೆರವೇರಿಸಲಿರುವರು. ಉಡುಪಿ ಶಾಸಕ ಕೆ.ರಘುಪತಿ ಭಟ್ ಉದ್ಘಾಟಿಸಲಿರುವರು. ಮುಖ್ಯ ಅತಿಥಿಗಳಾಗಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್, ಜಿಲ್ಲಾ ಕಾರ್ಯನಿರತ ಪರ್ತಕ್ರರ್ತರ ಸಂಘದ ಅಧ್ಯಕ್ಷ ಗಣೇಶ್ ಪ್ರಸಾದ್ ಪಾಂಡೇಲು ಭಾಗವಹಿಸಲಿರುವರು.

ಸುದ್ದಿಗೋಷ್ಠಿಯಲ್ಲಿ ಎಸ್‌ವೈಎಸ್ ರಾಜ್ಯ ಉಪಾಧ್ಯಕ್ಷ ಗುಡ್‌ವಿಲ್ ಮುಹ್ಯಿ ದ್ದೀನ್ ಹಾಜಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹಂಝತ್ ಹೆಜಮಾಡಿ, ರ್ಯಾಲಿಯ ನಾಯಕ ಶಾಹುಲ್ ನಈಮಿ ಕನ್ನಂಗಾರ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News