×
Ad

ಕಲಬೆರಕೆಯಿಂದ ಆಯುರ್ವೇದ ಔಷಧಿಗಳ ಗುಣವುಟ್ಟ ಕಳಪೆ: ಡಾ.ಸುನೀಲ್ ಕುಮಾರ್

Update: 2018-08-13 21:12 IST

ಉಡುಪಿ, ಆ.13: ಪ್ರಸಕ್ತ ದಿನಗಳಲ್ಲಿ ಸರಿಯಾದ ಗಿಡಮೂಲಿಕೆಗಳು ಸಿಗದೇ ಕಲಬೆರಕೆಯಿಂದಾಗಿ ತಯಾರಿಸಿದ ಔಷಧಿಗಳ ಗುಣಮಟ್ಟ ಕಳಪೆಯಾಗ ಬಹುದು. ಇದು ಜನರ ಆರೋಗ್ಯವನ್ನು ಮತ್ತಷ್ಟು ಹದೆಗೆಡಿಸುತ್ತದೆ. ಹಾಗಾಗಿ ಆಯುರ್ವೇದ ವೈದ್ಯರು ಔಷಧಿಗಳ ಗುಣಮಟ್ಟವನ್ನು ಕಾಯ್ದುಕೊಳ್ಳುವ ಬಗೆ ತಿಳಿದುಕೊಳ್ಳಬೇಕು ಎಂದು ಆಯುಷ್ ಇಲಾಖೆಯ ಚೆನೈನ ಪ್ರಾಂತೀಯ ಸಂಶೋಧನಾ ಕೇಂದ್ರದ ಮುಖ್ಯ ಸಂಶೋಧನಾಧಿಕಾರಿ ಡಾ.ಸುನಿಲ್ ಕುಮಾರ್ ತಿಳಿಸಿದ್ದಾರೆ.

ಕುತ್ಪಾಡಿ ಶ್ರೀ ಧರ್ಮಸ್ಥಳ ಆಯುರ್ವೆದ ಮಹಾವಿದ್ಯಾಲಯದ ದ್ರವ್ಯಗುಣ ವಿಭಾಗದ ವತಿಯಿಂದ ಕಾಲೇಜಿನ ಸಭಾಂಗಣದಲ್ಲಿ ಇತ್ತೀಚೆಗೆ ಆಯೋಜಿಸ ಲಾದ ‘ಗಿಡಮೂಲಿಕೆಗಳ ಮೌಲ್ಯಮಾಪನದಲ್ಲಿ ತಂತ್ರಗಾರಿಕೆಗಳು’ ಎಂಬ ವಿಷಯದ ಕುರಿತ ರಾಜ್ಯಮಟ್ಟದ ಕಾರ್ಯಗಾರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.

ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾಲ ಡಾ.ಜಿಶ್ರೀನಿವಾಸ ಆಚಾರ್ಯ ಮಾತನಾಡಿ, ಮರಗಳ ವಿವಿಧ ಭಾಗಗಳನ್ನು ಕಚ್ಚಾ ಸಾಮಾಗ್ರಿಯಾಗಿ ಬಳಸು ವಾಗ ಅದರ ಸಂಪೂರ್ಣ ಮಾಹಿತಿ ಅಗತ್ಯ. ಒಂದು ಗಿಡದ ಬದಲು ಬೇರೆ ಗಿಡವನ್ನು ಗುಣದ ಸಾಮ್ಯತೆಯಿಂದಾಗಿ ಬಳಸುವ ಕ್ರಮಗಳ ಬಗ್ಗೆ ದೀರ್ಘ ಸಂಶೋಧನೆಗಳ ಅಗತ್ಯವಿದೆ. ಹರ್ಬಲ್ ಆದರೂ ಔಷಧಿಗಳಿಗೆ ಗುಣಮಟ್ಟದ ನಿಯಂತ್ರಣಬೇಕು ಎಂದರು.

ಸ್ನಾತಕೋತ್ತರ ವಿಭಾಗ ಡೀನ್ ಡಾ.ನಿರಂಜನ್ ರಾವ್, ಸಹಾಯಕ ಡೀನ್ ಡಾ.ನಾಗರಾಜ್‌ಎಸ್., ಆಯುರ್ವೇದ ಆಸ್ಪತ್ರೆಯ ವೈಧ್ಯಕೀಯ ಅಧೀಕ್ಷಕಿ ಡಾ.ಮಮತಾ ಕೆ.ವಿ., ಎಸ್‌ಡಿಎಂ ಸಂಶೋಧನಾ ಕೇಂದ್ರದ ವಿಜ್ಞಾನಿ ಡಾ. ಪ್ರೇಮಲತಾ ಶೆಟ್ಟಿ ಉಪಸ್ಥಿತರಿದ್ದರು.

ದ್ರವ್ಯಗುಣ ವಿಭಾಗದ ಮುಖ್ಯಸ್ಥ ಡಾ.ಶ್ರೀಕಾಂತ್ ಸ್ವಾಗತಿಸಿದರು. ಸಹ ಪ್ರಾಧ್ಯಾಪಕಿ ಡಾ.ಚೈತ್ರಾ ಎಸ್.ಹೆಬ್ಬಾರ್ ವಂದಿಸಿದರು. ಡಾ.ಸ್ವಾತಿ ಬಿ.ಎಚ್. ಹಾಗೂ ಡಾ.ಅನ್ನಪೂರ್ಣ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.

ಬಳಿಕ ನಡೆದ ಕಾರ್ಯಾಗಾರದಲ್ಲಿ ಸಂಪನ್ಮೂಲ ವ್ಯಕಿತಿಗಳಾಗಿ ಡಾ. ಸುನಿಲ್ ಕುಮಾರ್, ಶ್ರೀಮತಿ ಸುಚಿತ್ರಾ ಪ್ರಭು, ಡಾ ಶ್ರೀಕಾಂತ್ ಪಿ, ಡಾ. ಚೈತ್ರ ಎಸ್.ಹೆಬ್ಬಾರ್, ಡಾ. ಸುಮ ವಿ. ಮಲ್ಯ, ಡಾ ಮೊಹಮ್ಮದ್ ಫೈಸಲ್, ಡಾ ನಿವೇದಿತಾ ಶೆಟ್ಟಿ ಗುಣಮಟ್ಟವನ್ನು ಗುರುತಿಸಲು ಅಗತ್ಯವಿರುವ ತಂತ್ರಗಾರಿಕೆಗಳ ಬಗ್ಗೆ ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸುಮಾರು 50 ಸ್ನಾತಕೋತತಿರ ಪ್ರತಿನಿಧಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ಮಾಹಿತಿಯನ್ನು ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News