ಅದಾನಿ ಪ್ರತಿಷ್ಠಾನದ 20ನೆ ವಾರ್ಷಿಕೋತ್ಸವ ಆಚರಣೆ

Update: 2018-08-13 15:44 GMT

ಪಡುಬಿದ್ರೆ, ಆ.13: ಯುಪಿಸಿಎಲ್ ಸಂಸ್ಥೆಯ ಅದಾನಿ ಫೌಂಡೇಶನ್‌ನ 20ನೆ ವರ್ಷದ ಪ್ರತಿಷ್ಟಾಪನಾ ದಿನವನ್ನು ಇತ್ತೀಚೆಗೆ ಶಿರ್ವ ಗ್ರಾಪಂ ವ್ಯಾಪ್ತಿಯ ವಿಶೇಷ ಮಕ್ಕಳ ಶಾಲೆಯಾದ ಮಾನಸ ಪುನರ್ವಸತಿ ಮತ್ತು ತರಬೇತಿ ಕೇಂದ್ರದಲ್ಲಿ ಮಕ್ಕಳಿಗೆ ಶಿಕ್ಷಣ ಪರಿಕರಗಳನ್ನು ಮತ್ತು ಕೊಡೆಗಳನ್ನು ವಿತರಿಸುವ ಮೂಲಕ ಆಚರಿಸಲಾಯಿತು.

ಅದಾನಿ ಯುಪಿಸಿಎಲ್‌ನ ಕಾರ್ಯನಿರ್ವಾಹಕ ನಿರ್ದೇಶಕ ಕಿಶೋರ್ ಆಳ್ವ ಮಾತನಾಡಿದರು. ಉಡುಪಿ ಪ್ರದೇಶದ ಕ್ಯಾಥಲಿಕ್ ಸಭೆಯ ಧರ್ಮಗುರು ಫಾ.ಫೆರ್ಡಿನಾಂಡ್ ಗೋನ್ಸಾಲ್ವೀಸ್, ನಿವೃತ್ತ ಶಿಕ್ಷಕ ಪುಂಡಲೀಕ ಮರಾಠೆ, ಅದಾನಿ ಯುಪಿಸಿಎಲ್‌ನ ಏಜಿಎಂ ಗಿರೀಶ್ ನಾವಡ, ಹಿರಿಯ ವ್ಯವಸ್ಥಾಪಕ ರವಿ ಆರ್.ಜೇರೆ, ಅದಾನಿ ಫೌಂಡೇಷನ್‌ನ ಸಿಬ್ಬಂಧಿ ವರ್ಗದವರಾದ ವಿನೀತ್ ಅಂಚನ್, ಸುಕೇಶ್ ಸುವರ್ಣ, ಅನುದೀಪ್ ಪೂಜಾರಿ, ಶುಭಮಂಗಳ ಎರ್ಮಾಳ್, ಶಿವಪ್ರಸಾದ್ ಶೆಟ್ಟಿ, ಧನರಾಜ್ ಉಪಸ್ಥಿತರಿದ್ದರು.

ಮಾನಸ ಟ್ರಸ್ಟ್‌ನ ಸದಸ್ಯ ಸೈಮಂಡ್ ಕೇಂದ್ರದ ಚಟುವಟಿಕೆಗಳ ಬಗ್ಗೆ ವಿವರಿಸಿದರು. ಶಾಲೆಯ ಉಪ ಪ್ರಾಂಶುಪಾಲೆ ಮುರಿಯಲ್ ಪ್ರೇಮಲತಾ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಟ್ರಸ್ಟ್‌ನ ಅಧ್ಯಕ್ಷ ಹೆನ್ರಿ ಮೆನೆೆಸ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News