ಘಝನಿ ಮೇಲೆ ದಾಳಿ: 100ಕ್ಕೂ ಅಧಿಕ ಪೊಲೀಸರು, ಸೈನಿಕರ ಸಾವು

Update: 2018-08-13 15:45 GMT

ಕಾಬೂಲ್, ಆ. 13: ಅಫ್ಘಾನಿಸ್ತಾನದ ಘಝನಿ ಪ್ರಾಂತದ ರಾಜಧಾನಿ ಘಝನಿ ನಗರವನ್ನು ವಶಪಡಿಸಿಕೊಳ್ಳಲು ತಾಲಿಬಾನ್ ನಡೆಸಿದ ದಾಳಿಯ ಬಳಿಕ ನಡೆದ ನಾಲ್ಕು ದಿನಗಳ ಭೀಕರ ಕದನದಲ್ಲಿ ಸುಮಾರು 100 ಪೊಲೀಸರು ಮತ್ತು ಸೈನಿಕರು ಹಾಗೂ ಕನಿಷ್ಠ 20 ನಾಗರಿಕರು ಮೃತಪಟ್ಟಿದ್ದಾರೆ ಎಂದು ರಕ್ಷಣಾ ಸಚಿವ ಜನರಲ್ ತಾರಿಖ್ ಶಾ ಬಹ್ರಾಮಿ ಸೋಮವಾರ ಹೇಳಿದ್ದಾರೆ.

ಶುಕ್ರವಾರ ತಾಲಿಬಾನ್ ಉಗ್ರರು ದಾಳಿ ಆರಂಭಿಸಿದ್ದರು.

ಉಗ್ರರು ಬಹು ಹಂತಗಳಲ್ಲಿ ನಡೆಸಿದ ದಾಳಿಯು ನಗರದ ರಕ್ಷಣೆಯಲ್ಲಿ ವ್ಯತ್ಯಯ ಉಂಟು ಮಾಡಿತ್ತು. ಪರಿಸ್ಥಿತಿಯ ಲಾಭವನ್ನು ಪಡೆದ ಉಗ್ರರು ನಗರದ ಹಲವು ಭಾಗಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡಿದ್ದರು.

ಅಫ್ಘಾನ್ ರಾಜಧಾನಿ ಕಾಬೂಲ್‌ನಿಂದ ಕೇವಲ 120 ಕಿ.ಮೀ. ದೂರದಲ್ಲಿರುವ ಈ ಆಯಕಟ್ಟಿನ ನಗರದ ತೀರಾ ಒಳಭಾಗಕ್ಕೆ ನುಸುಳುವಲ್ಲಿ ಉಗ್ರರು ಯಶಸ್ವಿಯಾಗಿರುವುದು ಆಡಳಿತ ವಲಯದಲ್ಲಿ ಭಾರೀ ಕಳವಳ ಮೂಡಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News