ಉಡುಪಿ ನಗರಸಭೆ ಚುನಾವಣೆ: ಕಾಂಗ್ರೆಸ್‌ನ 2ನೇ ಪಟ್ಟಿ ಬಿಡುಗಡೆ

Update: 2018-08-13 15:45 GMT

ಉಡುಪಿ, ಆ.13: ಇದೇ ಆ.29ರಂದು ನಡೆಯುವ ಉಡುಪಿ ನಗರಸಭೆಯ ಚುನಾವಣೆಗೆ ಹಾಲಿ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್‌ನ 12 ಅಭ್ಯರ್ಥಿಗಳ ದ್ವಿತೀಯ ಪಟ್ಟಿಯನ್ನು ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸತೀಶ್ ಅಮೀನ್ ಪಡುಕರೆ ಅವರು ಇಂದು ಬಿಡುಗಡೆಗೊಳಿಸಿದರು.

ಈ ಪಟ್ಟಿಯಲ್ಲಿ ಕೇವಲ ಇಬ್ಬರು ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಾಗಿದೆ. ಕಳೆದ ವಾರ ಪ್ರಕಟಿಸಿದ ಹತ್ತು ಸದಸ್ಯರ ಮೊದಲ ಪಟ್ಟಿಯಲ್ಲಿ ಆರು ಮಂದಿ ಹಾಲಿ ಸದಸ್ಯರಿಗೆ ಟಿಕೇಟ್ ನೀಡಲಾಗಿತ್ತು. ಇಂದು ಪ್ರಕಟಗೊಂಡ ಅಭ್ಯರ್ಥಿಗಳ ಹೆಸರು ಹಾಗೂ ಅವರು ಸ್ಪರ್ಧಿಸುವ ವಾರ್ಡ್‌ಗಳು ಹೀಗಿವೆ.

ಕೊಡಂಕೂರು-ಜ್ಯೋತಿಲಕ್ಷ್ಮೀ,ನಿಟ್ಟೂರು-ನಾರಾಯಣ ಜತ್ತನ್ನ,ಗೋಪಾಲಪುರ - ಐರಿನ್ ಮೆನೆಜಸ್, ಮೂಡು ಪೆರಂಪಳ್ಳಿ- ಸೆಲಿನ್ ಕರ್ಕಡ, ಮೂಡುಸಗ್ರಿ -ಜಾನಕಿ ಕೃಷ್ಣ ನಾಯ್ಕಿ, ಕುಂಜಿಬೆಟ್ಟು- ಶಶಿರಾಜ್ ಕುಂದರ್, ಕಡಿಯಾಳಿ - ಆಶಾ ಶ್ರೀನಿವಾಸ್, ಒಳಕಾಡು- ಜ್ಯೋತಿ ಹೆಬ್ಬಾರ್, ಅಜ್ಜರಕಾಡು- ಸುಮನ ಸುರೇಂದ್ರ ಆಚಾರ್ಯ, ಶೆಟ್ಟಿಬೆಟ್ಟು- ಸವಿತಾ ನಾಯಕ್, ಪರ್ಕಳ- ಪೂರ್ಣಿಮಾ ಸುಜಿತ್ ಶೆಟ್ಟಿಗಾರ್, ಇಂದ್ರಾಳಿ-ರಾಘವೇಂದ್ರ ನಾಯ್ಕಾ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News