×
Ad

ಉಡುಪಿ:ನಾಳೆ ಪಣಿಯಾಡಿ ಸ್ಮಾರಕ ತುಳು ಕಾದಂಬರಿ ಪ್ರಶಸ್ತಿ ಪ್ರದಾನ

Update: 2018-08-13 22:30 IST

ಉಡುಪಿ, ಆ.13: ತುಳುಕೂಟ ಉಡುಪಿ ಸಂಸ್ಥೆ ವತಿಯಿಂದ ನೀಡಲಾಗುವ 24ನೇ ವರ್ಷದ ಪ್ರತಿಷ್ಠಿತ ಎಸ್.ಯು.ಪಣಿಯಾಡಿ ನೆನಪಿನ ಪಣಿಯಾಡಿ ತುಳು ಕಾದಂಬರಿ ಪ್ರಶಸ್ತಿ ಪ್ರದಾನ ಸಮಾರಂಭ ಆ.15ರಂದು ಸಂಜೆ 4:30ಕ್ಕೆ ಉಡುಪಿ ಕಿದಿಯೂರು ಹೊಟೇಲಿನ ಪವನ್ ರೂಫ್‌ಟಾಪ್‌ನಲ್ಲಿ ನಡೆಯಲಿದೆ.

ಮುಂಬಯಿಯ ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರ ‘ಮಣ್ಣ್‌ದ ಮದಿಪು’ ಕಾದಂಬರಿ 2017-18ನೇ ಸಾಲಿನ ಎಸ್.ಯು. ಪಣಿಯಾಡಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಸಂದರ್ಭ ಪ್ರಶಸ್ತಿ ವಿತರಣೆ ಮತ್ತು ಕೃತಿ ಬಿಡುಗಡೆ ಸಮಾರಂಭ ನಡೆಯಲಿದೆ.

ಮುಂಬಯಿಯ ಕನ್ನಡ, ತುಳು ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ ಅವರ ‘ಮಣ್ಣ್‌ದ ಮದಿಪು’ ಕಾದಂಬರಿ 2017-18ನೇ ಸಾಲಿನ ಎಸ್.ಯು. ಪಣಿಯಾಡಿ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಈ ಸಂದರ್ಪ್ರಶಸ್ತಿವಿತರಣೆಮತ್ತುಕೃತಿಬಿಡುಗಡೆಸಮಾರಂ ನಡೆಯಲಿದೆ. ತುಳುಕೂಟ ಉಡುಪಿ ಅಧ್ಯಕ್ಷ ಬಿ.ಜಯಕರ್ ಶೆಟ್ಟಿ ಇಂದ್ರಾಳಿ ಸಮಾರಂಭದ ಅಧ್ಯಕ್ಷತೆ ವಹಿಸಲಿದ್ದು, ಹಿರಿಯಡ್ಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಡಾ. ನಿಕೇತನ ಕೃತಿಪರಿಚಯ ಮಾಡಲಿರುವರು. ಹಿರಿಯ ರಂಗಕರ್ಮಿ, ಸಾಹಿತಿ ಉದ್ಯಾವರ ಮಾಧವ ಆಚಾರ್ಯ, ಸಾಹಿತಿ ಸಿಮಂತೂರು ಚಂದ್ರಹಾಸ ಸುವರ್ಣ, ಮಲ್ಪೆಯ ಉದ್ಯಮಿ ಎನ್.ಟಿ.ಅಮೀನ್ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿರುವರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News