×
Ad

ಅಕ್ರಮ ಜಾನುವಾರು ಸಾಗಾಟ: ಐವರ ಬಂಧನ

Update: 2018-08-13 22:48 IST

ಬೈಂದೂರು, ಆ.13: ಕಂಟೈನರ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಐವರನ್ನು ಬೈಂದೂರು ಪೊಲೀಸರು ಆ.13ರಂದು ಬೆಳಗಿನ ಜಾವ ಐದು ಗಂಟೆ ಸುಮಾರಿಗೆ ಶಿರೂರು ಚೆಕ್ ಪೋಸ್ಟ್‌ನಲ್ಲಿ ಬಂಧಿಸಿ ದ್ದಾರೆ.

ದಾವಣಗೆರೆ ಜಿಲ್ಲೆಯ ಮೆಹಬೂಬ್(25), ತನ್ವೀರ್ ಸಾಬ್(24), ನಾಗರಾಜ(40), ಜಾವೆದ್(20), ಭಟ್ಕಳದ ಇಕ್ಕೇರಿ ಇಸ್ತಿಯಾರ್ ಅಹಮ್ಮದ್ (37) ಎಂಬವರು ಬಂಧಿತ ಆರೋಪಿಗಳು. ಬಂಧಿತರಿಂದ 10 ಜಾನುವಾರು ಹಾಗೂ ಕಂಟೈನರ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ.

ಇವರು ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಹಾನಗಲ್ ಹಾಗೂ ಸಿಂದಗಿ ಯಿಂದ ಖರೀದಿ ಮಾಡಿದ ಜಾನುವಾರುಗಳನ್ನು ಅಕ್ರಮವಾಗಿ ಭಟ್ಕಳ ಮೂಲಕ ಗೋವಾ ಕಸಾಯಿಖಾನೆಗೆ ಸಾಗಿಸುತ್ತಿದ್ದರೆನ್ನಲಾಗಿದೆ. ಈ ಬಗ್ಗೆ ಬೈಂದೂರು ಪೊಲಿೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News