×
Ad

ಪ್ರತಿಭಾ ಕಾರಂಜಿಯಲ್ಲಿ ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳ ಸಾಧನೆ

Update: 2018-08-13 23:39 IST

ಭಟ್ಕಳ, ಆ. 13: ಸಾರ್ವಜನಿಕ ಶಿಕ್ಷಣ ಇಲಾಖೆ ಕಾರವಾರ, ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಭಟ್ಕಳ ಇವರು ಸೋಮವಾರ ಹೆಬಳೆ ಪಂಚಾಯತ್ ವ್ಯಾಪ್ತಿಯ ಬೀಬಿ ಮೊಂಟೆಸರಿ ಶಾಲೆಯಲ್ಲಿ ಆಯೋಜಿಸಿದ್ದ ಮುರುಡೇಶ್ವರ ನ್ಯಾಶನಲ್ ಕಾಲೋನಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಶಾಲಾ ವಿದ್ಯಾರ್ಥಿಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ತರಬಿಯತ್ ಎಜ್ಯುಕೇಶನ್ ಸೂಸೈಟಿಯ ನ್ಯೂ ಶಮ್ಸ್ ಶಾಲಾ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ,

ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಸ್ಥೆಯ ಪ್ರಾಂಶುಪಾಲೆ ಫಹಮಿದಾ ಮುಲ್ಲಾ, ಕ್ಲೇ ಮಾಡೆಲಿಂಗ್ ಸ್ಪರ್ಧೆಯಲ್ಲಿ ಮುಹಮ್ಮದ್ ಶೂಐಬ್ ಪ್ರಥಮ, ಕಥೆ ಹೇಳುವ ಸ್ಪರ್ಧೆಯಲ್ಲಿ ಅಬ್ದುಲ್ಲಾ ಪ್ರಥಮ, ಆಶುಭಾಷಣದಲ್ಲಿ ಅಬ್ದುಲ್ಲಾ ಪ್ರಥಮ, ಉರ್ದು ಕಂಠಪಾಠ ಸ್ಪರ್ಧೆಯಲ್ಲಿ ಸೈಯ್ಯದ್ ಆಹ್ಮದ್ ಪ್ರಥಮ, ಭಕ್ತಿ ಗೀತೆಯಲ್ಲಿ ಅಬ್ಬಾದ್ ಜಾಕ್ಟಿ ಪ್ರಥಮ, ಇಂಗ್ಲಿಷ್ ಕಂಠಪಾಟ ಸ್ಪರ್ಧೆಯಲ್ಲಿ ಉನೈಸ್ ಸಿದ್ದೀಖಾ ದ್ವಿತೀಯಾ, ದೇಶ ಭಕ್ತಿ ಗೀತೆಯಲ್ಲಿ ನುಬೈದ್ ಮತ್ತು ತಂಡ ದ್ವಿತೀಯಾಸ್ಥಾನವನ್ನು ಪಡೆದುಕೊಂಡಿದ್ದಾರೆ.

ಕಿರಿಯ ಪ್ರಾಥಮಿಕ ಶಾಲಾ ಸ್ಪರ್ಧೆಗಳಲ್ಲಿ ಕಥೆ ಹೇಳುವ ಸ್ಪರ್ಧೆಯಲ್ಲಿ ಬಹಾ ಸಮನ್ ಪ್ರಥಮ, ಚಿತ್ರಕಲೆಯಲ್ಲಿ ಫಾತಿಮಾ ಇಮ್ರಾಹ್ ಪ್ರಥಮ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಯಲ್ಲಿ ಅಸ್ರಾರ್ ಆಹ್ಮದ್ ದ್ವಿತೀಯಾ, ಆಶುಭಾಷಣ ಸ್ಪರ್ಧೆಯಲ್ಲಿ ಬಾಸಿಖ್ ಪ್ರಥಮ, ಫುರ್ಖಾನ್ ಆಹ್ಮದ್ ಉರ್ದು ಕಂಠಪಾಟದಲ್ಲಿ ಪ್ರಥಮ ಹಾಗೂ ಹಿಂದಿ ಕಂಠಪಾಟ ಸ್ಪರ್ಧೆಯಲ್ಲಿ ದ್ವಿತೀಯಾ ಸ್ಥಾನ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News