×
Ad

ಮಂಗಳೂರು: ಯುವಕ ನಾಪತ್ತೆ

Update: 2018-08-13 23:53 IST

ಮಂಗಳೂರು, ಆ.13: ಅಡ್ಡೂರಿನಿಂದ ಮಂಗಳೂರಿಗೆ ತೆರಳಿ ಹಣ ಕೊಟ್ಟು ಬರುವುದಾಗಿ ಹೇಳಿ ಹೋಗಿದ್ದ ಯುವಕನೋರ್ವ ವಾಪಸಾಗದೆ ನಾಪತ್ತೆಯಾದ ಘಟನೆ ಪಾಂಡೇಶ್ವರ ಪೊಲೀಸ್ ಠಾಣಾ ವ್ಯಾಪ್ತಿ ನಡೆದಿದೆ.

ಬಜ್ಪೆ ಕುಳುಮಾರು ನಿವಾಸಿ ಹುಸೈನಾರ್ (36) ನಾಪತ್ತೆಯಾದ ಯುವಕ ಎಂದು ಗುರುತಿಸಲಾಗಿದ್ದು, ಆ.10ರಂದು ಹುಸೈನಾರ್ ನಾಪತ್ತೆಯಾಗಿದ್ದಾರೆ.

ಚಹರೆ: ನಾಪತ್ತೆಯಾದ ಯುವಕನಿಗೆ ಎಡಭುಜದ ಹಿಂದೆ ಅಪಘಾತವಾದ ಗಾಯದ ಗುರುತು ಇದೆ. ಈತ 5.3 ಅಡಿ ಎತ್ತರವಿದ್ದು, ಎಣ್ಣೆಗಪ್ಪು ಮೈಬಣ್ಣ, ಸಾಧಾರಣ ಮೈಕಟ್ಟು ಹೊಂದಿದ್ದಾನೆ. ನೀಲಿ ಜೀನ್ಸ್ ಪ್ಯಾಂಟ್ ಹಾಗೂ ಬಿಳಿಬಣ್ಣದ ಉದ್ದ ತೋಳಿನ ಅಂಗಿಯನ್ನು ಧರಿಸಿದ್ದರು. ನಾಪತ್ತೆಯಾದ ವ್ಯಕ್ತಿ ಬಗ್ಗೆ ಯಾವುದೇ ಮಾಹಿತಿ ತಿಳಿದು ಬಂದಲ್ಲಿ ಪಾಂಡೇಶ್ವರ ಪೊಲೀಸ್ ಠಾಣೆಯನ್ನು ಸಂಪರ್ಕಿಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News