ಕಲ್ಲಾಪು: ತಾಜುಲ್ ಉಲಮಾ ಉಚಿತ ವೈದ್ಯಕೀಯ ಶಿಬಿರ

Update: 2018-08-14 06:27 GMT

ಕಲ್ಲಾಪು, ಆ. 14: ಎಸ್ಸೆಸ್ಸೆಫ್ ಪಟ್ಲ ಶಾಖೆಯ ವತಿಯಿಂದ ತಾಜುಲ್ ಉಲಮಾ ಉಚಿತ ವೈದ್ಯಕೀಯ ಶಿಬಿರವು ಕಣಚೂರು ಆಸ್ಪತ್ರೆಯ ಸಹಯೋಗದೊಂದಿಗೆ ಇತ್ತೀಚೆಗೆ ಕಲ್ಲಾಪು ಪಟ್ಲ ಸರ್ಕಾರಿ ಶಾಲೆಯಲ್ಲಿ ನಡೆಯಿತು.

ಪಟ್ಲ ಮಸೀದಿ ಮುದರ್ರಿಸ್ ಅಶ್ರಫ್ ಸಖಾಫಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಎಸ್ ವೈ ಎಸ್ ಉಳ್ಳಾಲ ಸೆಂಟರ್ ಅಧ್ಯಕ್ಷ ಜಲಾಲ್ ತಂಙಳ್ ದುಆ ಮೂಲಕ  ಚಾಲನೆ ನೀಡಿದರು. ಪಟ್ಲ ಮಸೀದಿ ಪ್ರ. ಕಾರ್ಯದರ್ಶಿ ಸದ್ದಾಮ್ ಕಲ್ಲಾಪು ಸ್ವಾಗತ ಭಾಷಣ ಮಾಡಿದರು. ಎಸ್ಸೆಸ್ಸೆಫ್ ಉಳ್ಳಾಲ ಡಿವಿಶನ್ ಅಧ್ಯಕ್ಷ ಮುನೀರ್ ಸಖಾಫಿ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಮುಖ್ಯ ಅತಿಥಿಯಾಗಿ ಡಾ. ಮುರಳಿ ಮೋಹನ್ ಚೂಂತಾರು ಆಗಮಿಸಿ, ಮಾತನಾಡಿ ಶುಭ ಹಾರೈಸಿದರು.

ಈ ಸಂದರ್ಭ ಕಣಚೂರು ಆಸ್ಪತ್ರೆ ವೈದ್ಯ ಡಾ. ರಾಜ್ ಶೇಕರ್, ಪಟ್ಲ ಮಸೀದಿ ಅಧ್ಯಕ್ಷ ಮಹ್ಮೂದ್ ಹಾಜಿ, ಉಳ್ಳಾಲ ನಗರಸಭಾ ಕೌನ್ಸಿಲರ್ ಉಸ್ಮಾನ್ ಕಲ್ಲಾಪು, ಸಾಮಾಜಿಕ ಕಾರ್ಯಕರ್ತ ಚಂದ್ರಹಾಸ್ ಪಂಡಿತ್ ಹೌಸ್, ಮಾನವ ಹಕ್ಕು ಹೋರಾಟಗಾರ ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ಇಂಜಿನಿಯರ್  ಮುಸ್ತಾಕ್ ಪಟ್ಲ, ಜೆಡಿಎಸ್ ಮುಖಂಡ ಫಯಾಝ್ ಪಟ್ಲ, ಎಸ್ಸೆಸ್ಸೆಫ್ ತೊಕ್ಕೊಟ್ಟು ಸೆಕ್ಟರ್ ಅಧ್ಯಕ್ಷ ಜಾಫರ್ ಅಳೇಕಲ, ಡಿವಿಶನ್ ಪ್ರ. ಕಾರ್ಯದರ್ಶಿ ಹಮೀದ್ ತಲಪಾಡಿ, ಕ್ಯಾಂಪಸ್ ಕಾರ್ಯದರ್ಶಿ ಇಲ್ಯಾಸ್ ಪೊಟ್ಪೊಳಿಕೆ, ಶಾಖಾಧ್ಯಕ್ಷ ಮುಸ್ತಫಾ, ಉಳ್ಳಾಲ ದರ್ಗಾ ಸದಸ್ಯ ಮೊಹಿದಿನ್ ಹಾಗೂ ಇನ್ನಿತರ ಸಾಮಾಜಿಕ, ಧಾರ್ಮಿಕ ಮುಖಂಡರುಗಳು ಭಾಗವಹಿಸಿದ್ದರು. ಪಟ್ಲ ಶಾಖಾ ಕಾರ್ಯಕರ್ತ ಶರೀಫ್ ಪಟ್ಲ ಶಿಬಿರದ ಉಸ್ತುವಾರಿ ವಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News