×
Ad

ಸ್ವಾತಂತ್ರೋತ್ಸವ: ಮಂಗಳೂರು ರೈಲು ನಿಲ್ದಾಣದಲ್ಲಿ ತಪಾಸಣೆ

Update: 2018-08-14 17:38 IST

ಮಂಗಳೂರು, ಆ.14: ಸ್ವಾತಂತ್ರೋತ್ಸವ ದಿನಾಚರಣೆ ಪ್ರಯುಕ್ತ ಮಂಗಳೂರು ಜಂಕ್ಷನ್ ರೈಲು ನಿಲ್ದಾಣದಲ್ಲಿ ಸುರಕ್ಷತೆಯ ದೃಷ್ಟಿಯಿಂದ ಬಾಂಬ್ ಪತ್ತೆ-ವಿಲೇವಾರಿ ಸ್ಕ್ವಾಡ್ ತಂಡ (ಬಿಡಿಡಿಎಸ್), ಶ್ವಾನದಳ, ರೈಲ್ವೆ ಸುರಕ್ಷತಾ ಪಡೆ ಹಾಗೂ ಸಿಬ್ಬಂದಿಯಿಂದ ಮಂಗಳವಾರ ಬೆಳಗ್ಗೆ 11:50ರಿಂದ 12:20ರವರೆಗೆ ತಪಾಸಣೆ ನಡೆಸಲಾಯಿತು.

ಶ್ವಾನ ದಳ ನಿರ್ವಾಹಕ ಪೂರ್ಣೇಶ ಹಾಗೂ ಮಂಗಳೂರು ಜಂಕ್ಷನ್‌ನ ರೈಲ್ವೆ ಸುರಕ್ಷತಾ ಪಡೆಯ ಎಸ್ಸೈ ಸುಂದರಲಿಂಗಂ ಸಿಬ್ಬಂದಿಯ ಜೊತೆ ತಪಾಸಣೆ ಕಾರ್ಯ ಕೈಗೊಳ್ಳಲಾಗಿತ್ತು.

ರೈಲು ನಿಲ್ದಾಣದ ಒಂದನೇ, ಎರಡನೇ ಮತ್ತು ಮೂರನೇ ಪ್ಲಾಟ್‌ಫಾರ್ಮ್‌ನ ವೇಟಿಂಗ್ ಹಾಲ್, ಪಾರ್ಕಿಂಗ್ ಏರಿಯಾ, ಪಾರ್ಸೆಲ್ ವಿಭಾಗ, ಪ್ರಯಾಣಿಕರ ಲಗೇಜು ಹಾಗೂ ನಿಲ್ದಾಣದ ಆವರಣದಲ್ಲಿ ತಪಾಸಣೆ ನಡೆಸಲಾಯಿತು. ತಪಾಸಣೆ ವೇಳೆ ಯಾವುದೇ ಅಪಾಯಕಾರಿ ವಸ್ತುಗಳನ್ನು ಪತ್ತೆಯಾಗಿಲ್ಲ ಎಂದು ತಿಳಿದುಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News