ಏಶ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಹಕಮ್ ಸಿಂಗ್ ನಿಧನ

Update: 2018-08-14 13:19 GMT

ಹೊಸದಿಲ್ಲಿ, ಆ.14: ಅನಾರೋಗ್ಯದಿಂದ ಬಳಲುತ್ತಿದ್ದ ಏಶ್ಯನ್ ಗೇಮ್ಸ್ ಮಾಜಿ ಚಾಂಪಿಯನ್ ಹಕಮ್ ಸಿಂಗ್ ಮಂಗಳವಾರ ಪಂಜಾಬ್‌ನ ಸಂಗ್ರೂರ್‌ನ ಖಾಸಗಿ ಆಸ್ಪತ್ರೆಯಲ್ಲಿ ಅಸುನೀಗಿದ್ದಾರೆ.

64 ವರ್ಷ ವಯಸ್ಸಿನ ಸಿಂಗ್ ಅವರು ಕಳೆದ ಕೆಲವು ಸಮಯದಿಂದ ಲಿವರ್ ಹಾಗೂ ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಗೆ ಚಿಕಿತ್ಸೆ ಪಡೆಯುತ್ತಿದ್ದರು.

ಸಿಂಗ್ 1978ರಲ್ಲಿ ಬ್ಯಾಂಕಾಕ್‌ನಲ್ಲಿ ನಡೆದಿದ್ದ ಏಶ್ಯಾಗೇಮ್ಸ್‌ನಲ್ಲಿ 20 ಕಿ.ಮೀ.ರೇಸ್‌ವಾಕ್‌ನಲ್ಲಿ ಚಿನ್ನದ ಪದಕ ಜಯಿಸಿದ್ದರು.

ಧ್ಯಾನ್‌ಚಂದ್ ಪ್ರಶಸ್ತಿ ವಿಜೇತ ಸಿಂಗ್ ಭಾರತೀಯ ಸೇನೆಯ 6 ಸಿಖ್ ರೆಜಿಮೆಂಟ್‌ನಲ್ಲಿ ಹವಾಲ್ದಾರ್ ಆಗಿಯೂ ಸೇವೆ ಸಲ್ಲಿಸಿದ್ದರು.

ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದ ಸಿಂಗ್‌ಗೆ ಕ್ರೀಡಾಸಚಿವ ರಾಜ್ಯವರ್ಧನ್ ಸಿಂಗ್ ರಾಥೋಡ್ 10 ಲಕ್ಷ ರೂ. ಹಾಗೂ ಪಂಜಾಬ್ ಮುಖ್ಯಮಂತ್ರಿ ಕ್ಯಾಪ್ಟನ್ ಅಮರೀಂದರ್ ಸಿಂಗ್ 5 ಲಕ್ಷ ರೂ. ಆರ್ಥಿಕ ನೆರವು ನೀಡಿದ್ದರು.

ಸಿಂಗ್ ನಿಧನಕ್ಕೆ ಪಂಜಾಬ್ ಕ್ರೀಡಾ ಹಾಗೂ ಯುವಜನ ವ್ಯವಹಾರ ಸಚಿವ ರಾಣಾ ಗುರ್ಮಿತ್ ಸಿಂಗ್ ಸೋಧಿ ಶೋಕ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News