×
Ad

ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ಸ್ಥಗಿತ

Update: 2018-08-14 21:06 IST

ಮಂಗಳೂರು, ಆ. 14: ಕಳೆದ ಎರಡು ದಿನಗಳಿಂದ ಎಡೆಬಿಡದೇ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಶಿರಾಡಿ ಘಾಟ್‌ನಲ್ಲಿ ವಿವಿಧೆಡೆ ಭೂಕುಸಿತ ಉಂಟಾಗಿದ್ದು, ಈ ಹಿನ್ನೆಲೆ ಹಾಸನ-ಮಂಗಳೂರು ಮಾರ್ಗದ ರೈಲು ಸಂಚಾರ ಆ.14ರಂದು ಬೆಳಗ್ಗೆಯಿಂದ ಸ್ಥಗಿತಗೊಂಡಿದೆ.

ಈಗಾಗಲೇ ವಿವಿಧೆಡೆ ಭೂ ಕುಸಿತ ಉಂಟಾಗಿದ್ದ ಸ್ಥಳದಲ್ಲಿ ತೆರವು ಕಾರ್ಯಾಚರಣೆ ನಡೆದಿದೆ. ಮತ್ತೆ ಭೂಕುಸಿತ ಉಂಟಾಗುವ ಸಾಧ್ಯತೆ ಇದೆ.

ಆ.14ರ ಕಾರವಾರ-ಯಶವಂತಪುರ ರೈಲು(ಟ್ರೇನ್ ನಂ.16516) ಮಂಗಳೂರು ಜಂಕ್ಷನ್ ಮತ್ತು ಯಶವಬಂತಪುರದ ನಡುವೆ ರದ್ದಾಗಿದೆ. ಯಶವಂತಪುರ-ಮಂಗಳೂರು(ಜಂ) ರೈಲು(16575) ಹಾಸನ ಮತ್ತು ಮಂಗಳೂರಿನ ಮಾರ್ಗ ಮಧ್ಯೆ ರದ್ದುಗೊಂಡಿದೆ.

ಬೆಂಗಳೂರು(ಕೆಎಸ್‌ಆರ್)-ಕಣ್ಣೂರು/ಕಾರವಾರ ರೈಲು(16517/16523)ನ್ನು ಪಾಲಕ್ಕಾಡ್ ಜಂ.(ಪಿಜಿಟಿ) ವಾಯಾ ಶೊರನೂರು ಜಂ.(ಎಸ್‌ಆರ್‌ಆರ್) ಮಾರ್ಗವಾಗಿ ತಿರುಗಿಸಲಾಗಿದೆ. ಕಾರವಾರ-ಬೆಂಗಳೂರು(ಕೆಎಸ್‌ಆರ್) ರೈಲು(16514) ಕಾರವಾರ ಮತ್ತು ಮಂಗಳೂರಿನ ಮಾರ್ಗ ಮಧ್ಯೆ ರದ್ದುಗೊಂಡಿದೆ.

ಕಣ್ಣೂರು/ಕಾರವಾರ-ಬೆಂಗಳೂರು (ಕೆಎಸ್‌ಆರ್) ರೈಲು (16512/16514) ಶೊರನೂರು ಜಂ.(ಎಸ್‌ಆರ್‌ಆರ್) ವಾಯಾ ಪಾಲಕ್ಕಾಡ್ ಜಂ.(ಪಿಜಿಟಿ) ಮಾರ್ಗವಾಗಿ ರೈಲು ಓಡಲಿದೆ ಎಂದು ರೈಲ್ವೆ ಮೈಸೂರು ವಿಭಾಗದ ಮ್ಯಾನೇಜರ್ ಮತ್ತು ಪಿಆರ್‌ಒ ಎಸ್.ಜಿ. ಯತೀಶ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News