ಕುಂದಾಪುರ: 25 ಮನೆಗಳಿಗೆ ನುಗ್ಗಿದ ನೀರು, ಜನರ ರಕ್ಷಣೆ ಗಂಜಿ ಕೇಂದ್ರ ಆರಂಭ

Update: 2018-08-14 16:23 GMT

ಕುಂದಾಪುರ, ಆ.14: ತಾಲೂಕಿನಾದ್ಯಂತ ಇಂದು ವರುಣನ ರುದ್ರನರ್ತನ ಜೋರಾಗಿ ಮುಂದುವರಿದಿದ್ದು, ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ. ಗುಲ್ವಾಡಿ ಗ್ರಾಮದ ಸೌಕೂರು, ಚಿಕ್ಕಪೇಟೆ, ಕುಚ್ಚಟ್ಟು ಭಾಗದಲ್ಲಿ 25ಕ್ಕೂ ಅಧಿಕ ಮನೆಗಳಿಗೆ ನೀರು ನುಗ್ಗಿದೆ. ಮನೆಯಲ್ಲಿದ್ದವರನ್ನು ರಕ್ಷಣೆ ಮಾಡಿ, ಸುರಕ್ಷಿತ ಪ್ರದೇಶ ಗಳಿಗೆ ಸ್ಥಳಾಂತರಿಸಲಾಗಿದೆ.

ಗುಲ್ವಾಡಿ ಗ್ರಾಮದ ಚಿಕ್ಕಪೇಟೆ, ಸೌಕೂರುಕುದ್ರು, ಕುಚ್ಚಟ್ಟು ಭಾಗದಲ್ಲಿ 30ಕ್ಕೂ ಹೆಚ್ಚು ಮನೆಗಳು ಅಪಾಯದಲ್ಲಿವೆ. ಭಾರೀ ಪ್ರಮಾಣದ ಕೃಷಿ ಪ್ರದೇಶಗಳು ಜಲಾವೃತಗೊಂಡಿವೆ.

ರಕ್ಷಣೆಗೆ ದೋಣಿಗಳ ಬಳಕೆ: ಸೌಕೂರುಕುದ್ರು, ಚಿಕ್ಕಪೇಟೆ, ಕುಚ್ಚಟ್ಟು ಭಾಗದಲ್ಲಿರುವ ನೂರಾರು ಮಂದಿಯನ್ನು ದೋಣಿಗಳ ಮೂಲಕ ಕುಂದಾಪುರ ಹಾಗೂ ಉಡುಪಿಯ ಅಗ್ನಿಶಾಮಕ ದಳದ ಸಿಬಂದಿಗಳು ರಕ್ಷಣೆ ಮಾಡಿದ್ದಾರೆ. ಮನೆಗಳಲ್ಲಿದ್ದ ಅನೇಕ ಜಾನುವಾರುಗಳನ್ನು ಸಹ ರಕ್ಷಿಸಲಾಗಿದೆ.

ಸೌಕೂರು ಗ್ರಾಮದ ಮೋಹನ ದೇವಾಡಿಗ, ಸುಬ್ಬಲಕ್ಷ್ಮೀ, ವಾಸು ದೇವಾಡಿಗ, ನಾಗು ದೇವಾಡಿಗ ಸೇರಿದಂತೆ ಒಟ್ಟು 6 ಮನೆಗಳು ಮುಳುಗಡೆ ಭೀತಿ ಎದುರಿಸುತ್ತಿವೆ. ಕೊಲ್ಲೂರು ಸಮೀಪ ವಿದ್ಯುತ್ ಕಂಬ ರಸ್ತೆಗುರುಳಿದ್ದು, ಸ್ವಲ್ಪ ಕಾಲ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. 2 ವಿದ್ಯುತ್ ಕಂಬಗಳಿಗೂ ಹಾನಿಯಾಗಿದೆ.

ಸೌಕೂರಲ್ಲಿ ಗಂಜಿ ಕೇಂದ್ರ: ಮನೆಗಳಿಂದ ರಕ್ಷಿಸಿ ಸುರಕ್ಷಿತವಾಗಿ ಕರೆತಂದ ಜನರಿಗೆ ಸೌಕೂರು ಶ್ರೀದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಗಂಜಿ ಕೇಂದ್ರವನ್ನು ತೆರೆಯಲಾಗಿದ್ದು, ಅಲ್ಲಿಯೇ ಹೆಚ್ಚಿನವರಿಗೆ ಆಶ್ರಯ ನೀಡಲಾಗಿದೆ.

ಕುಂದಾಪುರ-ಶಿವಮೊಗ್ಗ ರಾಜ್ಯ ಹೆದ್ದಾರಿಯ ಕೋಣಿ ಸಮೀಪದ ರಸ್ತೆಯಲ್ಲಿ ಸಂಚರಿಸುತ್ತಿದ್ದಾಗ ದ್ವಿಚಕ್ರ ವಾಹನವೊಂದು ಸವಾರ ಹಾಗೂ ಹಿಂಬದಿ ಸವಾರ ಸಹಿತ ಇಂದು ಅಪರಾಹ್ನ ಆಕಸ್ಮಿಕವಾಗಿ ಪಕ್ಕದ ಗದ್ದೆಗುರುಳಿದ ಘಟನೆ ನಡೆದಿದೆ. ಬಳಿಕ ಅವರಿಬ್ಬರು ಸುರಕ್ಷಿತವಾಗಿ ಮೇಲಕ್ಕೆ ಬಂದಿದ್ದಾರೆ.

ಗಂಗೊಳ್ಳಿಯಲ್ಲಿ ಕೃತಕ ನೆರೆ

ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲದಿರುವುದರಿಂದ ಗಂಗೊಳ್ಳಿ ಗ್ರಾಮದ ದುರ್ಗಿಕೇರಿ ವಠಾರದಲ್ಲಿ ಕೃತಕ ನೆರೆ ಸೃಷ್ಟಿಯಾಗಿದ್ದು, 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಅಪಾರ ಹಾನಿ ಸಂಭವಿಸಿದೆ. ಮಳೆ ನೀರು ಸರಾಗವಾಗಿ ಹರಿದು ಹೋಗಲು ವ್ಯವಸ್ಥೆ ಮಾಡುವಂತೆ ಸ್ಥಳೀಯ ಗ್ರಾಪಂ.ಗೆ ಮನವಿ ಮಾಡಿದರೂ, ಯಾವುದೇ ಪ್ರಯೋಜನವಾಗಿಲ್ಲ. ಮನೆಯ ವಠಾರದಲ್ಲೇ ಮಳೆ ನೀರು ವ್ಯಾಪಕ ಪ್ರಮಾಣ ದಲ್ಲಿ ನಿಂತಿದ್ದು ಜನರು ಪರದಾಡುವಂತಾಗಿದೆ.

ಪರಿಹಾರ ಕಾರ್ಯಕ್ಕಿಳಿದ ಎಸಿ

ಮುಳುಗಡೆಯಾದ ಸೌಕೂರು ಸಮೀಪದ ಮನೆಗಳಿಗೆ ಕುಂದಾಪುರ ಉಪ ವಿಭಾಗದ ಸಹಾಯಕ ಆಯುಕ್ತ ಟಿ. ಭೂಬಾಲನ್ ಅವರು ಬೋಟಿನ ಮೂಲಕ ತೆರಳಿ ವೀಕ್ಷಿಸಿದ್ದಲ್ಲದೇ, ಅಲ್ಲಿದ್ದ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸುವಲ್ಲಿ ನೆರವಾದರು. ಅವರೊಂದಿಗೆ ಕುಂದಾಪುರ ತಹಶೀಲ್ದಾರ್ ತಿಪ್ಪೇಸ್ವಾಮಿ, ತಾಪಂ ಇಒ ಕಿರಣ್ ಪೆಡ್ನೇಕರ್, ಗ್ರಾಪಂ ಪಿಡಿಒ ಮತ್ತಿತರ ಅಧಿಕಾರಿಗಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News