ಎಲ್ಲ ತೊಡಕುಗಳನ್ನು ನಿವಾರಿಸುವೆ: ಸ್ಟಾಲಿನ್

Update: 2018-08-14 16:33 GMT

ಚೆನ್ನೈ,ಆ.14: ಮಂಗಳವಾರ ಇಲ್ಲಿ ನಡೆದ ಡಿಎಂಕೆಯ ಮಹತ್ವದ ಸಭೆಯಲ್ಲಿ ಪಕ್ಷದ ಕಾರ್ಯಾಧ್ಯಕ್ಷ ಎಂ.ಕೆ.ಸ್ಟಾಲಿನ್ ಅವರು ತಾನು ತಂದೆ ಎಂ.ಕೆ ಕರುಣಾನಿಧಿಯವರ ಮಾರ್ಗದಲ್ಲಿ ಮುನ್ನಡೆಯುತ್ತೇನೆ ಮತ್ತು ಎಲ್ಲ ಅಡ್ಡಿಗಳನ್ನು ನಿವಾರಿಸುವುದಾಗಿ ಹೇಳಿದರು. ಇದೇ ವೇಳೆ ಪಕ್ಷದ ಹಿರಿಯ ನಾಯಕರು ಸ್ಟಾಲಿನ್‌ಗೆ ತಮ್ಮ ಬೆಂಬಲವನ್ನು ವ್ಯಕ್ತಪಡಿಸಿದರು.

ತಲೈವರ್ ಇಲ್ಲದೆ ಕಾರ್ಯಕಾರಿ ಸಮಿತಿಯ ಸಭೆ ನಡೆಸುವುದನ್ನು ನಂಬಲಾಗುತ್ತಿಲ್ಲ. ನೀವು ಕಾರ್ಯಕರ್ತರು ನಿಮ್ಮ ನಾಯಕನನ್ನು ಕಳೆದುಕೊಂಡಿದ್ದರೆ ನಾನು ನನ್ನ ಪೋಷಕ ಮುತ್ತು ತಂದೆಯನ್ನು ಕಳೆದುಕೊಂಡಿದ್ದೇನೆ ಎಂದು ಆ.7ರಂದು ಕರುಣಾನಿಧಿಯವರ ನಿಧನದ ಬಳಿಕ ಮೊದಲ ಬಾರಿಗೆ ನಡೆದ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಸ್ಟಾಲಿನ್ ಹೇಳಿದರು.

ಕರುಣಾನಿಧಿಯವರ ಅಂತ್ಯಸಂಸ್ಕಾರವನ್ನು ಮರೀನಾ ಬೀಚ್‌ನಲ್ಲಿ ನಡೆಸಲು ಮದ್ರಾಸ್ ಉಚ್ಚ ನ್ಯಾಯಾಲಯದದಿಂದ ನಿರ್ದೇಶ ಪಡೆದುಕೊಂಡಿದ್ದಕ್ಕಾಗಿ ಜನರು ನನ್ನನ್ನು ಹೊಗಳುತ್ತಿದ್ದಾರೆ. ಆದರೆ ಈ ಹೊಗಳಿಗೆ ಡಿಎಂಕೆಯ ಕಾನೂನು ಘಟಕಕ್ಕೆ ಸಲ್ಲಬೇಕು ಎಂದ ಅವರು,ಕಾನೂನು ಹೋರಾಟದಲಿ ನಾನು ಸೋತಿದ್ರೆ ಕರುಣಾನಿಧಿಯವರ ಬದಲು ಮರೀನಾ ಬೀಚ್‌ನಲ್ಲಿ ನನ್ನ ಅಂತ್ಯಸಂಸ್ಕಾರ ನಡೆಯುತ್ತಿತ್ತು ಎಂದರು.

ನಾಲ್ಕು ವರ್ಷಗಳ ಹಿಂದೆಯೆ ಅಶಿಸ್ತಿಗಾಗಿ ಪಕ್ಷದಿಂದ ಉಚ್ಚಾಟಿತರಾಗರುವ ಕರುಣಾನಿಧಿಯವರ ಹಿರಿಯ ಪುತ್ರ ಎಂ.ಕೆ.ಅಳಗಿರಿ ಅವರು,ತನ್ನ ತಂದೆಯ ನಿಷ್ಠರ ಬೆಂಬಲವನ್ನು ತಾನು ಹೊಂದಿದ್ದೇನೆ ಎಂದು ಸೋಮವಾರ ಹೇಳಿಕೊಂಡಿದ್ದರು. ಇದನ್ನು ಉತ್ತರಾಧಿಕಾರಕ್ಕಾಗಿ ನಡೆಯುತ್ತಿರುವ ಕಲಹ ಎಂದು ವಿಶ್ಲೇಷಿಸಲಾಗುತ್ತಿದೆ. ಸಂಜೆಯ ವೇಳೆಗೆ ಅಳಗಿರಿಯವರ ಭದ್ರಕೋಟೆಯಾಗಿರುವ ಮದುರೈನಲ್ಲಿ ಎಲ್ಲೆಡೆ ಅವರ ಚಿತ್ರವಿದ್ದ ಕಲೈನಾರ್ ಡಿಎಂಕೆ ನೀತನ ಪಕ್ಷದ ಪೋಸ್ಟರ್‌ಗಳು ರಾರಾಜಿಸಿದ್ದವು.

ಕರುಣಾನಿಧಿಯವರು ಸ್ಟಾಲಿನ್‌ರನ್ನು ತನ್ನ ಉತ್ತರಾಧಿಕಾರಿಯಾಗಿ ಬೆಳೆಸಿದ್ದಾರೆ ಮತ್ತು ಅವರಿಗೆ ಪಕ್ಷವನ್ನು ಮುನ್ನಡೆಸುವ ಎಲ್ಲ ಸಾಮರ್ಥ್ಯಗಳೂ ಇವೆ ಎಂದು ಡಿಎಂಕೆಯ ಪ್ರಧಾನ ಕಾರ್ಯದರ್ಶಿ ದುರೈಮುರುಗನ್ ಸಭೆಯಲ್ಲಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News