×
Ad

ಮಹಿಳಾ ಮೋರ್ಚಾದಿಂದ ಆಷಾಡದಲ್ಲೊಂದು ಕಮಲ ಕೂಟ

Update: 2018-08-14 22:47 IST

ಉಡುಪಿ, ಆ.14: ಉಡುಪಿ ಜಿಲ್ಲಾ ಬಿಜೆಪಿ ಮಹಿಳಾ ಮೋರ್ಚಾದ ವತಿ ಯಿಂದ ಆಷಾಡದಲ್ಲೊಂದು ಕಮಲ ಕೂಟ ಕಾರ್ಯಕ್ರಮವನ್ನು ಮಂಗಳವಾರ ಕಡಿಯಾಳಿಯಲ್ಲಿರುವ ಬಿಜೆಪಿ ಪಕ್ಷದ ಕಚೇರಿಯಲ್ಲಿ ಆಯೋಜಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಬಿಜೆಪಿ ಜಿಲ್ಲಾಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಹಿಂದಿನವರು ಸೇವಿಸುತ್ತಿದ್ದ ಆಹಾರ ಪದಾರ್ಥಗಳು ಔಷಧಿ ಗುಣಗಳನ್ನು ಹೊಂದಿದ್ದವು. ಇದರಿಂದ ಆರೋಗ್ಯ ಕೂಡ ಉತ್ತಮವಾಗಿತ್ತು. ಆದರೆ ಇಂದಿನ ವಿಷಕಾರಿ ಆಹಾರದಿಂದ ನಾವು ನಮ್ಮ ಆರೋಗ್ಯವನ್ನು ಹಾಳು ಮಾಡುತ್ತಿದ್ದೇವೆ. ಈ ನಿಟ್ಟಿನಲ್ಲಿ ನಮ್ಮ ಆರೋಗ್ಯ ಪದ್ದತಿಯನ್ನು ಬದಲಾಯಿಸಿ ಕೊಳ್ಳಬೇಕಾಗಿದೆ ಎಂದರು.

ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಉದಯ ಕುಮಾರ್ ಶೆಟ್ಟಿ, ಪತ್ರಕರ್ತೆ ಯಶೋಧಾ ಕೇಶವ್, ಜಿಪಂ ಸದಸ್ಯೆ ಗೀತಾಂಜಲಿ ಸುವರ್ಣ, ಮುಖಂಡರಾದ ಶ್ಯಾಮಲಾ ಕುಂದರ್, ಸಂಧ್ಯಾ ರಮೇಶ್, ರಜನಿ ಹೆಬ್ಬಾರ್, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪ್ರಿಯದರ್ಶಿನಿ ಬೆಸ್ಕೂರ್, ಕೇಸರಿ, ಪ್ರಮೀಳಾ ಹರೀಶ್ ಮೊದಲಾದವರು ಉಪಸ್ಥಿತರಿದ್ದರು.

ಜಿಪಂ ಉಪಾಧ್ಯಕ್ಷೆ ಶೀಲಾ ಕೆ.ಶೆಟ್ಟಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಿಳಾ ಮೋರ್ಚಾದ ಪ್ರಧಾನ ಕಾರ್ಯದರ್ಶಿ ವೀಣಾ ಶೆಟ್ಟಿ ಸ್ವಾಗತಿಸಿದರು. ತಾರಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಮೋರ್ಚಾದ ಸದಸ್ಯ ರುಗಳು ತಮ್ಮ ತಮ್ಮ ಮನೆಗಳಲ್ಲಿ ತಯಾರಿಸಿ ತಂದ ಆಟಿ ತಿಂಗಳ ಸುಮಾರು 25ಕ್ಕೂ ಅಧಿಕ ವಿವಿಧ ಖಾದ್ಯಗಳನ್ನು ಎಲ್ಲರಿಗೂ ಉಣಬಡಿಸಲಾಯಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News