ಟಿಬೆಟ್‌ನಲ್ಲಿರುವ ಚೀನಾ ಸೈನಿಕರಿಗೆ ಆಮ್ಲಜನಕ ಪೂರೈಕೆ

Update: 2018-08-14 17:41 GMT

ಬೀಜಿಂಗ್, ಆ. 14: ಕಿಂಘಾಯ್ ಟಿಬೆಟ್ ಪ್ರಸ್ಥಭೂಮಿಯಲ್ಲಿ ನಿಯೋಜಿಸಲ್ಪಟ್ಟಿರುವ ಸೈನಿಕರಿಗಾಗಿ ಚೀನಾ ಸೇನೆಯು ಆಮ್ಲಜನಕ ಕೇಂದ್ರಗಳನ್ನು ಸ್ಥಾಪಿಸಿದೆ ಹಾಗೂ ಅತಿ ಒತ್ತಡದ ಆಮ್ಲಜನಕ ಚಿಕಿತ್ಸೆಯನ್ನು ಆರಂಭಿಸಿದೆ.

ಅಷ್ಟೇ ಅಲ್ಲದೆ, ವಿಶೇಷವಾಗಿ ವಿನ್ಯಾಸಗೊಳಿಸಲಾದ ಹೊತ್ತೊಯ್ಯಬಹುದಾದ ಬರಾಕ್‌ಗಳನ್ನು ಒದಗಿಸಿದೆ.

ಆಮ್ಲಜನಕ ಮಟ್ಟ ಕಡಿಮೆಯಿರುವ ಅತಿ ಎತ್ತರದ ಪ್ರದೇಶಗಳಲ್ಲಿ ಸೈನಿಕರ ಯುದ್ಧ ಸಾಮರ್ಥ್ಯವನ್ನು ಹೆಚ್ಚಿಸುವುದಕ್ಕಾಗಿ ಚೀನಾ ಸೇನೆಯು ಈ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಪೀಪಲ್ಸ್ ಲಿಬರೇಶನ್ ಆರ್ಮಿಯ ವೆಬ್‌ಸೈಟ್ ‘81.ಸಿಎನ್’ ವರದಿ ಮಾಡಿದೆ.

ಟಿಬೆಟ್‌ನಲ್ಲಿರುವ ಚೀನಾ ಸೈನಿಕರ ಯುದ್ಧ ಸನ್ನದ್ಧತೆ ಮತ್ತು ತರಬೇತಿ ಬಗ್ಗೆ ಚೀನಾದ ಅಧಿಕೃತ ಮಾಧ್ಯಮಗಳು ಇತ್ತೀಚಿನ ತಿಂಗಳುಗಳಲ್ಲಿ ಹೆಚ್ಚೆಚ್ಚು ವರದಿಗಳನ್ನು ಮಾಡುತ್ತಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News