×
Ad

ಯೆನೆಪೋಯದಲ್ಲಿ ಗಣ್ಯರೊಂದಿಗೆ ವಿಚಾರ ವಿನಿಮಯ ಕೂಟ

Update: 2018-08-14 23:11 IST

ಕೊಣಾಜೆ, ಆ. 14: ದೇರಳಕಟ್ಟೆಯ ಯೇನೆಪೊಯ ಮೆಡಿಕಲ್ ಕಾಲೇಜು ಆಸ್ಪತ್ರೆಯ ಸಭಾಂಗಣದಲ್ಲಿ ಸ್ಥಳೀಯ ಧಾರ್ಮಿಕ ಮುಖಂಡರುಗಳು, ಚುನಾಯಿ ಪ್ರತಿನಿಧಿಗಳು ಮತ್ತು ಇನ್ನಿತರ ವೃತ್ತಿಯಲ್ಲಿ ತೊಡಗಿರುವ ಪ್ರತಿನಿಧಿಗಳೊಂದಿಗೆ ವಿಚಾವಿನಿಮಯ ಕೂಟ ನಡೆಯಿತು.

ಅಂಬ್ಲಮೊಗರು ಕೋಟ್ರಗುತ್ತು ಶ್ರೀ ಲಕ್ಷ್ಮೀ ನರಸಿಂಹ ದೇವಸ್ಥಾನದ ಆಡಳಿತಮೋಕ್ತೇಸರರಾದ ಪದ್ಮನಾಭ ರೈ, ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಆಸ್ಪತ್ರೆಯ ಕಾರ್ಯನಿರ್ವಹಣಾಧಿಕಾರಿ ಮತ್ತು ವೈದ್ಯಕಿಯ ಅಧೀಕ್ಷಕರಾದ ಡಾ. ಮುಹಮ್ಮದ್ ಅಮೀನ್ ವಾಣಿ ಕಾರ್ಯಕ್ರಮದ ಅದ್ಯಕ್ಷತೆ ವಹಿಸಿ  ಅಸ್ಪತ್ರೆಯ ಸೌಲಭ್ಯಗಳ ಬಗ್ಗೆ ವಿಸ್ತ್ರತ ಮಾಹಿತಿ ನೀಡಿ, ಯೆನೆಪೊಯ ಆಸ್ಪತ್ರೆ ಅತ್ಯಂತ ಕನಿಷ್ಠ ವೆಚ್ಚದಲ್ಲಿ ಉನ್ನತ ದರ್ಜೆಯ ಚಿಕಿತ್ಸೆಯನ್ನು ನೀಡುತ್ತಿದ್ದು ಸಾರ್ವಜನಿಕರು ಇದರ ಪ್ರಯೋಜನ ಪಡೆದುಕೊಳ್ಳುವಂತೆ ಮನವಿ ಮಾಡಿದರು.

ವೇದಿಕೆಯಲ್ಲಿ ಧಾರ್ಮಿಕ ಮುಖಂಡರಾದ  ಇಸ್ಮಾಯಿಲ್ ತಂಙಳ್,  ಬಿ ಎಮ್ ಶಾಲೆ ಉಳ್ಳಾಲ ಇದರ ಸಹ ಶಿಕ್ಷಕಿ  ಐಲಿನ್ ಉಪಸ್ಥಿತರಿದ್ದು, ಯೆನೆಪೊಯ ಆಸ್ಪತ್ರೆಯ ಸೇವೆಯ ಬಗ್ಗೆ ಶ್ಲಾಘಿಸಿದರು.

ಸುಮಾರು 100 ಜನ ಭಾಗವಹಿಸಿದ್ದ ಈ ಕಾರ್ಯಕ್ರಮದಲ್ಲಿ ವೈದ್ಯರು, ಜನಪ್ರತಿನಿಧಿಗಳು, ಧಾರ್ಮಿಕ ಮುಖಂಡರುಗಳು, ಉದ್ದಿಮೆದಾರರು, ಶಿಕ್ಷಕರುಗಳು, ಮತ್ತು ವಿವಿಧ ಸಂಘಸಂಸ್ಥೆಗಳ ಪದಾಧಿಕಾರಿಗಳು ವಿಚಾರ ವಿನಿಮಯದಲ್ಲಿ ಪಾಲ್ಗೊಂಡು, ಆರೋಗ್ಯ ಸೇವೆಯಲ್ಲಿ ಜನಸಾಮಾನ್ಯರ ಪಾತ್ರದ ಬಗ್ಗೆ ಪೂರಕ ಮಹಿತಿ ಹಾಗೂ ಸಲಹೆ ಸೂಚನೆಯನ್ನು ನೀಡಿದರು.

ಆಸ್ಪತ್ರೆ ಆಡಳಿತ ವಿಭಾಗದ ಡಾ. ಸುನಿತಾ ಸಲ್ಡಾನ, ವೈದ್ಯಕೀಯ ಸಮಾಜ ಕಾರ್ಯ ವಿಭಾಗದ ಮುಖ್ಯಸ್ಥರಾದ ಡಾ. ಮುಹಮ್ಮದ್ ಗುತ್ತಿಗಾರ್ ವಿಚಾರ ವಿನಿಮಯ ಕೂಟದಲ್ಲಿ ಪಾಲ್ಗೊಂಡು ಸಲಹೆ ಸೂಚನೆಗಳನ್ನು ನೀಡಿದರು.  ಆಸ್ಪತ್ರೆಯ ಮಾರ್ಕೆಟಿಂಗ್ ಎಕ್ಸಿಕ್ಯೂಟಿವ್ ವಿಜಯಾನಂದ ಶೆಟ್ಟಿ ಸ್ವಾಗತಿಸಿ, ಮಾರ್ಕೆಟಿಂಗ್ ಸಹಾಯಕರಾದ  ಶಿವಪ್ರಸಾದ್ ವಂದಿಸಿದರು. ಡಾ.ನಾಗರಾಜ್ ಶೇಟ್ ಮತ್ತು ಡಾ.ಗ್ಲಾಡಿಸ್ ಕೊಲಾಸೊ ಕಾರ್ಯಕ್ರಮ ನಿರೂಪಿಸಿದರು.  ಪ್ರವೀಣ್ ಕುಮಾರ್, ಅಬ್ದುಲ್ ಅಝೀಝ್, ಅಬ್ದುಲ್‌ ರಝಾಕ್, ಉಮ್ಮರ್ ಶಾಫಿ, ಗೊಡ್ವಿನ್ ವಿನ್ಸೆಂಟ್ ಹಾಗೂ  ಅಕ್ಷತಾ ಶೆಟ್ಟಿ ಕಾರ್ಯಕ್ರಮ ಸಂಯೊಜಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News