×
Ad

ಮಂಗಳೂರು: ಆ.25 ರಂದು ಅಕ್ಷರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ

Update: 2018-08-14 23:55 IST

ಮಂಗಳೂರು,ಆ.14: ಅಕ್ಷರ ಇ-ಮ್ಯಾಗಝಿನ್ ವತಿಯಿಂದ ಆಗಸ್ಟ್ 25 ರಂದು ಶನಿವಾರ ಬೆಳಗ್ಗೆ 10 ಗಂಟೆಗೆ ಮಂಗಳೂರು ನಗರದಲ್ಲಿ ಯುವ ಸಾಹಿತಿಗಳ ಅಕ್ಷರ ಸಮ್ಮಿಲನ ಹಾಗೂ ಸನ್ಮಾನ ಕಾರ್ಯಕ್ರಮ ನಡೆಯಲಿದೆ.

ಸಾಹಿತ್ಯ ಕ್ಷೇತ್ರ- ಇದ್ರೀಸ್ ತೋಡಾರ್ ಹಾಗೂ ಸಾಮಾಜಿಕ ಕ್ಷೇತ್ರ-ಆಶಿಕ್ ಕುಕ್ಕಾಜೆಗೆ ಅಕ್ಷರ ಪುರಸ್ಕಾರ ನೀಡಲಾಗುವುದು.

ಮುಖ್ಯ ಅತಿಥಿಗಳಾಗಿ ರಾಜೀವ್ ಗಾಂಧಿ ಯುನಿವರ್ಸಿಟಿಯ ಸೆನೆಟ್ ಸದಸ್ಯ ಡಾ. ಯು.ಟಿ. ಇಫ್ತಿಕಾರ್ ಅಲಿ, ರಾಜ್ಯ ಆಹಾರ ಆಯೋಗದ ಸದಸ್ಯ ಬಿ.ಎ. ಮುಹಮ್ಮದ್ ಅಲಿ ಕಮ್ಮರಡಿ ಭಾಗವಹಿಸಲಿರುವರು ಎಂದು ಪ್ರಧಾನ ಸಂಪಾದಕ ಬಿ.ಎಸ್‌. ಇಸ್ಮಾಯಿಲ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News