×
Ad

ಭಾರೀ ಮಳೆ: ಕಾಸರಗೋಡಿನಲ್ಲಿ ಹಲವು ಕುಟುಂಬಗಳ ಸ್ಥಳಾಂತರ

Update: 2018-08-15 20:41 IST

ಕಾಸರಗೋಡು, ಆ. 15:  ಭಾರೀ ಮಳೆಯಿಂದ ಕಾಸರಗೋಡಿನ ಚಂದ್ರಗಿರಿ ಹೊಳೆ ಉಕ್ಕಿ ಹರಿಯುತ್ತಿದ್ದು , ಪ್ರವಾಹ ಉಂಟಾದ ಹಿನ್ನಲೆಯಲ್ಲಿ 25 ರಷ್ಟು ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.  ಕೊರಕ್ಕೋಡು ಪರಿಸರದ  ತಗ್ಗು ಪ್ರದೇಶ ಜಲಾವೃತ ಗೊಂಡಿದ್ದು , ಅಗ್ನಿಶಾಮಕ ದಳ , ಕಂದಾಯ ಇಲಾಖೆ , ಪೊಲೀಸರ ನೆರವಿನಿಂದ ಕುಟುಂಬಗಳನ್ನು ಸ್ಥಳಾಂತರಿಸಲಾಗಿದೆ.

ತೀರವಾಸಿಗಳು ಮುಂಜಾಗ್ರತಾ ಕ್ರಮ ತೆಗೆದುಕೊಳ್ಳುವಂತೆ ಅಧಿಕಾರಿಗಳು ಮುನ್ನೆಚ್ಚರಿಕೆ ನೀಡಿದ್ದಾರೆ. ತಳಂಗರೆ ಪಶ್ಚಿಮ ಭಾಗ ದಲ್ಲಿ ರಸ್ತೆಗೆ ನೀರು ನುಗ್ಗಿ  ಸಂಚಾರಕ್ಕೆ ಅಡಚಣೆ ಯಾಗಿದೆ. ಬೆಳಗ್ಗೆಯಿಂದ ಮಳೆಯ ಅಬ್ಬರ  ಕಡಿಮೆಯಾಗಿದ್ದರೂ ಸಂಜೆ ಬಿರುಸುಗೊಂಡಿದೆ. 

ಆ. 16ರಂದು ಸಭೆ 

ಭಾರೀ ಮಳೆ ಹಿನ್ನಲೆಯಲ್ಲಿ ಕೈಗೊಳ್ಳಬೇಕಾದ ಮುಂಜಾಗ್ರತಾ ಕ್ರಮದ ಕುರಿತು  ಚರ್ಚಿಸಲು  ಜಿಲ್ಲಾ ಮಟ್ಟದ  ಅಧಿಕಾರಿಗಳ ಸಭೆ ಗುರುವಾರ  ಬೆಳಿಗ್ಗೆ 10.30ಕ್ಕೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆಯಲಿದೆ.

ಸಭೆಯಲ್ಲಿ ನಿಯೋಜಿತ ಜಿಲ್ಲಾಧಿಕಾರಿ  ಸಜಿತ್ ಬಾಬು ,  ಜಿಲ್ಲಾ ಹೆಚ್ಚುವರಿ ದಂಡಾಧಿಕಾರಿ  ಎನ್. ದೇವಿದಾಸ್  ಹಾಗೂ ಇತರ ಅಧಿಕಾರಿಗಳು ಪಾಲ್ಗೊಳ್ಳುವರು.

ಪರೀಕ್ಷೆ ಮುಂದೂಡಿಕೆ: 

ಆಗಸ್ಟ್ 31 ರಿಂದ ನಡೆಸಲು ದ್ದೇಶಿಸಿದ್ದ ಶಾಲಾ ಪರೀಕ್ಷೆಗಳನ್ನು ಮುಂದೂಡಲಾಗಿದೆ. ಮಳೆ - ಪ್ರವಾಹ ಹಿನ್ನೆಲೆಯಲ್ಲಿ ಪರೀಕ್ಷೆ ಮುಂದೂಡ ಲಾಗಿದೆ ಎಂದು ರಾಜ್ಯ ಶಿಕ್ಷಣ ಇಲಾಖಾ ಉಪ ನಿರ್ದೇಶಕರು ತಿಳಿಸಿದ್ದಾರೆ .

ಓಣಂ ರಜೆ ಕಳೆದು  ಒಂದರಿಂದ ಹತ್ತರ ತನಕ  ಪರೀಕ್ಷೆ ನಡೆಯಬೇಕಿತ್ತು.  ಬದಲಿ  ದಿನಾಂಕ ವನ್ನು ಮುಂದೆ ತಿಳಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News