ಜಲಂಧರ್ ಬಿಷಪ್ ವಿಚಾರಣೆಯ ಬಳಿಕ ಬರಿಗೈಯಲ್ಲಿ ಮರಳಿದ ಕೇರಳ ಪೊಲೀಸರು

Update: 2018-08-15 16:40 GMT

ತಿರುವನಂತಪುರ,ಆ.15: ಪಂಜಾಬಿನ ಜಲಂಧರ ಧರ್ಮಪ್ರಾಂತ್ಯದ ಬಿಷಪ್‌ರ ವಿರುದ್ಧದ ಅತ್ಯಾಚಾರದ ಆರೋಪದಲ್ಲಿ ಅವರನ್ನು ವಿಚಾರಣೆಗೊಳಪಡಿಸಿದ ಕೇರಳ ಪೊಲೀಸರು ಬುಧವಾರ ರಾಜ್ಯಕ್ಕೆ ವಾಪಸಾಗಿದ್ದಾರೆ.

ಜಲಂಧರದ ಬಿಷಪ್ ಹೌಸ್‌ನಲ್ಲಿ ಸುಮಾರು 14 ಗಂಟೆ ಠಿಕಾಣಿ ಹೂಡಿದ್ದ ಕೇರಳ ಪೊಲೀಸರು ಬಿಷಪ್ ಫ್ರಾಂಕೊ ಮುಲಕ್ಕಲ್ ಅವರನ್ನು ಒಂಭತ್ತು ಗಂಟೆಗಳಷ್ಟು ಸುದೀರ್ಘ ಕಾಲ ವಿಚಾರಣೆಗೊಳಪಡಿಸಿದ್ದರು. ಬಿಷಪ್ ತನ್ನ ಮೇಲೆ ಅತ್ಯಾಚಾರವೆಸಗಿದ್ದರು ಎಂದು ಕೇರಳದ ನನ್‌ವೋರ್ವರು ಆರೋಪಿಸಿದ್ದಾರೆ.

ಮುಲಕ್ಕಲ್ ಅವರನ್ನು ಬಂಧಿಸಿಲ್ಲವೇಕೆ ಎಂಬ ಪ್ರಶ್ನೆಗೆೆ ತನಿಖಾ ತಂಡದ ನೇತೃತ್ವ ವಹಿಸಿದ್ದ ಡಿಎಸ್‌ಪಿ ಕೆ.ಸುಭಾಷ್ ಅವರು,ವಿಚಾರಣೆ ಸಂದರ್ಭ ಬಿಷಪ್ ಸಹಕರಿಸಿದ್ದರು ಮತ್ತು ಅಗತ್ಯವಾದರೆ ತಂಡವು ಮತ್ತೆ ಬಿಷಪ್‌ಹೌಸ್‌ಗೆ ತೆರಳಲಿದೆ ಎಂದು ಉತ್ತರಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News