ಕೋಸ್ಟ್ ಗಾರ್ಡ್‌ನಿಂದ ‘ವಿಶ್ವಾಸ್’ ಬೋಟಿನ ರಕ್ಷಣೆ

Update: 2018-08-15 17:01 GMT

ಉಡುಪಿ, ಆ.15: ಸುರತ್ಕಲ್ ಸಮೀಪದ 35 ಮಾರು ದೂರದ ಸಮುದ್ರ ದಲ್ಲಿ ತಾಂತ್ರಿಕ ದೋಷದಿಂದ ಸಿಲುಕಿಕೊಂಡಿದ್ದ ‘ವಿಶ್ವಾಸ್’ ಬೋಟನ್ನು ಇಂದು ಮಂಗಳೂರಿನ ಕೋಸ್ಟ್ ಗಾರ್ಡ್ ರಕ್ಷಿಸಿರುವ ಬಗ್ಗೆ ವರದಿಯಾಗಿದೆ.

ನಾಲ್ಕು ದಿನಗಳ ಹಿಂದೆ ಮಲ್ಪೆ ಬಂದರಿನಿಂದ ಮೀನುಗಾರಿಕೆ ತೆರಳಿದ್ದ ಪಾಂಡುರಂಗ ತಿಂಗಳಾಯ ಎಂಬವರ ವಿಶ್ವಾಸ್ ಬೋಟು ಇಂಜಿನ್ ಸಮಸ್ಯೆ ಯಿಂದ ಸಮುದ್ರ ಮಧ್ಯೆ ಕೆಟ್ಟು ನಿಂತಿತ್ತು. ಇದರಲ್ಲಿ ಸುಮಾರು 8 ಮೀನುಗಾರರಿ ದ್ದರು. ಕಳೆದ ಎರಡು ದಿನಗಳಿಂದ ಸಮುದ್ರ ಪಕ್ಷುಬ್ದವಾಗಿದ್ದುದರಿಂದ ಬೋಟಿನ ರಕ್ಷಣಾ ಕಾರ್ಯ ಸಾಧ್ಯವಾಗಿರಲಿಲ್ಲ.

ಜು.14ರಂದು ವಿಶ್ವಾಸ್ ಬೋಟು ಇರುವ ಸ್ಥಳವನ್ನು ಗುರುತಿಸಿದ್ದ ಕೋಸ್ಟ್ ಗಾರ್ಡ್, ಇಂದು ಬೆಳಗ್ಗೆ ಶಿಫ್‌ನೊಂದಿಗೆ ಸ್ಥಳಕ್ಕೆ ತೆರಳಿ ವಿಶ್ವಾಸ್ ಬೋಟನ್ನು ಪಣಂಬೂರು ಬಂದರಿಗೆ ಸುರಕ್ಷಿತವಾಗಿ ತಂದಿದೆ ಎಂದು ಮೀನುಗಾರಿಕಾ ಇಲಾಖೆಯ ಉಪನಿರ್ದೇಶಕ ಪಾಶ್ವನಾರ್ಥ್ ಪತ್ರಿಕೆಗೆ ತಿಳಿಸಿದ್ದಾರೆ.

ಈಗಾಗಲೇ ಮೀನುಗಾರಿಕೆಗೆ ತೆರಳಿರುವ ಬಹುತೇಕ ಬೋಟುಗಳು ಸುರಕ್ಷಿತ ವಾಗಿ ಬಂದರಿಗೆ ಆಗಮಿಸಿದ್ದು, ಸದ್ಯಕ್ಕೆ ಕಡಲು ಪ್ರಕ್ಷುಬ್ದವಾಗಿರುವುದರಿಂದ ಯಾವುದೇ ಬೋಟುಗಳು ಸಮುದ್ರಕ್ಕೆ ಇಳಿಯದಂತೆ ಬಂದರಿನಲ್ಲಿ ಮೈಕ್‌ನಲ್ಲಿ ಘೋಷಣೆ ಮಾಡಲಾಗಿದೆ ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News