15 ವರ್ಷಗಳಿಂದಲೂ ಪತ್ರಗಳನ್ನು ವಿತರಿಸದೇ ಕುಳಿತಿದ್ದ ಪೋಸ್ಟ್ ಮಾಸ್ಟರ್!

Update: 2018-08-15 17:05 GMT
ಸಾಂದರ್ಭಿಕ ಚಿತ್ರ

ಭುವನೇಶ್ವರ,ಆ.15: ಕಳೆದ 15 ವರ್ಷಗಳಿಂದಲೂ ಜನರಿಗೆ ಪತ್ರಗಳನ್ನು ವಿತರಿಸುವ ಗೋಜಿಗೆ ಹೋಗದ ಭದ್ರಕ್ ಜಿಲ್ಲೆಯ ಓಧಂಗಾ ಗ್ರಾಮದ ಪೋಸ್ಟ್ ಮಾಸ್ಟರ್‌ನನ್ನು ಇಲಾಖೆಯು ಸೇವೆಯಿಂದ ಅಮಾನತುಗೊಳಿಸಿದೆ.

2004ನೇ ಇಸವಿಯ ದಿನಾಂಕಗಳನ್ನು ಹೊಂದಿದ್ದ ಕೆಲವು ಪತ್ರಗಳು ಸೇರಿದಂತೆ 6000ಕ್ಕೂ ಅಧಿಕ ಅಂಚೆಪತ್ರಗಳು ಬಟವಾಡೆಯಾಗದೇ ಗ್ರಾಮದ ಶಾಖಾ ಅಂಚೆಕಚೇರಿಯಲ್ಲಿಯೇ ಬಾಕಿಯಾಗಿವೆ ಎಂದು ಗ್ರಾಮಸ್ಥರು ದೂರಿದ್ದರು. ಪ್ರಾಥಮಿಕ ವಿಚಾರಣೆಯ ಬಳಿಕ ಶಾಖಾ ಪೋಸ್ಟ್ ಮಾಸ್ಟರ್ ಜಗನ್ನಾಥ ಪುಹಾನ್ ಸೇವೆಯಿಂಂದ ಅಮಾನತುಗೊಂಡಿದ್ದಾನೆ.

 ಅಂಚೆಕಚೇರಿಯು ಈಗಿನ ಕಟ್ಟಡಕ್ಕೆ ಸ್ಥಳಾಂತರಗೊಳ್ಳುವ ಮುನ್ನ ಕಾರ್ಯಾಚರಿಸುತ್ತಿದ್ದ ಪಾಳು ಶಾಲಾ ಕಟ್ಟಡದಲ್ಲಿ ಆಟವಾಡುತ್ತಿದ್ದ ಮಕ್ಕಳು ಈ ಅಂಚೆಪತ್ರಗಳನ್ನು ಪತ್ತೆ ಹಚ್ಚಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News