ಉಪ್ಪೂರಿನಲ್ಲಿ ಸಚಿವರಿಂದ ನಾಗರಪಂಚಮಿ ಪೂಜೆ

Update: 2018-08-15 17:11 GMT

ಉಡುಪಿ, ಆ.15: ಕರಾವಳಿಯವರೇ ಆದ ಉಡುಪಿ ಜಿಲ್ಲಾ ಉಸ್ತುವಾರಿ ಸಚಿವೆ ಡಾ.ಜಯಮಾಲಾ ಅವರು, ತುಳುವರಿಗೆ ಅತಿ ಪ್ರಮುಖವಾದ ನಾಗರ ಪಂಚಮಿಯನ್ನು ಉಪ್ಪೂರು ಗ್ರಾಮದ ಕುದ್ರುಬೆಟ್ಟಿನಲ್ಲಿ ಆಚರಿಸಿದರು.

ಇಂದು ಬೆಳಗ್ಗೆ ಉಪ್ಪೂರಿನ ನೆರೆಪೀಡಿತ ಪ್ರದೇಶಗಳ ಪರಿಶೀಲನೆಗೆ ತೆರಳಿದ್ದ ಸಂದರ್ಭದಲ್ಲಿ ಉಪ್ಪೂರಿನ ಕುದ್ರುಬೆಟ್ಟು ಗ್ರಾಮದಲ್ಲಿ ಸ್ಥಳೀಯರು ನಾಗಬನದಲ್ಲಿ ಪೂಜೆ ನಡೆಸುತ್ತಿರುವುದನ್ನು ಗಮನಿಸಿದ ಸಚಿವೆ, ಸ್ಥಳೀಯರ ಆಹ್ವಾನದಂತೆ ನಾಗಸನ್ನಿಧಿಗೆ ತೆರಳಿ ಪೂಜೆಯಲ್ಲಿ ಪಾಲ್ಗೊಂಡರು.

ಸ್ಥಳೀಯ ಜನರೊಂದಿಗೆ ಬೆರೆತು ಅವರೊಂದಿಗೆ ನಿಂತು ಪ್ರಾರ್ಥನೆ ಸಲ್ಲಿಸಿ, ತಂಬಿಲದ ಪ್ರಸಾದ ಸ್ವೀಕರಿಸಿದರು. ನೆರೆಪ್ರದೇಶದ ಜನತೆಗೆ ಕ್ಷೇಮವಾಗುವಂತೆ ಒಳ್ಳೆಯ ಕೆಲಸಗಳು ಸಚಿವರಿಂದ ನಡೆಯುಂತಾಗಲಿ ಎಂದು ಈ ಸಂದರ್ಭದಲ್ಲಿ ಅರ್ಚಕರು ಊರವರ ಪರವಾಗಿ ಹಾರೈಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News