ಆಸ್ಟ್ರೇಲಿಯ ಸೆನೆಟ್‌ಗೆ ಪ್ರಥಮ ಮುಸ್ಲಿಂ ಮಹಿಳೆ ನೇಮಕ

Update: 2018-08-15 17:36 GMT

ಸಿಡ್ನಿ, ಆ.15: ಆಸ್ಟ್ರೇಲಿಯದಲ್ಲಿ ಜನಾಂಗೀಯ ವಿವಾದ ಭುಗಿಲೆದ್ದಿರುವ ಬೆನ್ನಿಗೇ ದೇಶದ ಶಾಸನಸಭೆಯ ಪ್ರಥಮ ಮುಸ್ಲಿಂ ಮಹಿಳಾ ಸದಸ್ಯೆಯಾಗಿ ಪಾಕಿಸ್ತಾನ ಮೂಲದ ಮೆಹರೀನ್ ಫಾರೂಕಿ ಆಯ್ಕೆಯಾಗಿದ್ದಾರೆ. ನ್ಯೂ ಸೌತ್ ವೇಲ್ಸ್‌ನಿಂದ ಗ್ರೀನ್ ಪಕ್ಷದ ಸಂಸದೆಯಾಗಿ ಫಾರೂಕಿಯವರನ್ನು ಬುಧವಾರ ಸದನದ ಖಾಲಿಯಿದ್ದ ಸ್ಥಾನಕ್ಕೆ ಆಯ್ಕೆ ಮಾಡಲಾಯಿತು. ಈ ವೇಳೆ ಮಾತನಾಡಿದ ಫಾರೂಕಿ, ಆಸ್ಟ್ರೇಲಿಯದ ಭವಿಷ್ಯವು ವೈವಿಧ್ಯತೆಯಿಂದ ಮತ್ತಷ್ಟು ಬಲಿಷ್ಠವಾಗಲಿದೆ ಎಂದು ತಿಳಿಸಿದ್ದಾರೆ.

ಇದಕ್ಕೂ ಮುನ್ನ ಮಾತನಾಡಿದ ಇನ್ನೋರ್ವ ನೂತನ ಸಂಸದ ಫ್ರೇಝರ್ ಆ್ಯನಿಂಗ್, ದೇಶದಲ್ಲಿ ವಲಸಿಗರನ್ನು ನಿಭಾಯಿಸಲು ಅಂತಿಮ ಪರಿಹಾರ ಕಂಡುಕೊಳ್ಳಬೇಕು ಎಂದು ಕರೆ ನೀಡಿದ್ದರು. ಅವರ ಈ ಹೇಳಿಕೆ ಸಾರ್ವತ್ರಿಕವಾಗಿ ವ್ಯಾಪಕ ಟೀಕೆಗೆ ಗುರಿಯಾಗಿದೆ. ಇದಕ್ಕೆ ಪ್ರತಿಕ್ರಿಯಿಸಿರುವ ಫಾರೂಕಿ, ಆ್ಯನಿಂಗ್ ತಮ್ಮ ಪ್ರಥಮ ಸಂಸದೀಯ ಭಾಷಣದಲ್ಲಿ ದ್ವೇಷ ಮತ್ತು ಜನಾಂಗೀಯತೆಯ ವಿಷ ಬಿತ್ತುವ ಮೂಲಕ ಆಸ್ಟ್ರೇಲಿಯದ ಪ್ರಜೆಗಳ ಮುಖಕ್ಕೆ ಹೊಡೆದಿದ್ದಾರೆ ಎಂದು ತಿಳಿಸಿದ್ದಾರೆ. ನಾನೋರ್ವ ಮುಸ್ಲಿಂ ವಲಸಿಗಳು ಮತ್ತು ನಾನು ದೇಶದ ಸಂಸದೆಯಾಗಿ ಆಯ್ಕೆಯಾಗುತ್ತಿದ್ದೇನೆ. ಇದನ್ನು ಫ್ರೇಝರ್ ಆ್ಯನಿಂಗ್ ತಡೆಯಲು ಸಾಧ್ಯವಿಲ್ಲ ಎಂದು ಫಾರೂಕಿ ಖಾರವಾಗಿ ನುಡಿದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News