ವಕ್ಫ್ ಮಾಹಿತಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವ
Update: 2018-08-15 23:13 IST
ಉಡುಪಿ ಅ.15 : ಉಡುಪಿ ನಾಯರ್‍ಕೆರೆಯ ವಕ್ಫ್ ಮಾಹಿತಿ ಕೇಂದ್ರದಲ್ಲಿ ಸಂಭ್ರಮದ ಸ್ವಾತಂತ್ರ್ಯೋತ್ಸವವನ್ನು ಬೆಳಿಗ್ಗೆ 7.30ಕ್ಕೆ ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ನಿವೃತ್ತ ದೈಹಿಕ ಶಿಕ್ಷಣ ಶಿಕ್ಷಕರೂ, ಎನ್.ಸಿ.ಸಿ. ಆಫಿಸರ್ ಶ್ರೀ ಬಿ. ರತ್ನಾಕರ ಶೆಟ್ಟಿ ಅವರು ಧ್ವಜಾರೋಹಣಗೈದು ಸ್ವಾತಂತ್ರದ ಮಹತ್ವ ಹಾಗೂ ಸಮಾಜಸೇವೆಯ ಕುರಿತು ಮಾತನಾಡಿದರು.
ಇನ್ನಿಬ್ಬರು ಅತಿಥಿಗಳಾಗಿ ನಾಯರ್‍ಕೆರೆ ಹಾಶಿಮಿ ಮಸೀದಿಯ ಅಧ್ಯಕ್ಷರಾದ ಝಕರಿಯಾ ಅಸ್ಸಾದಿ, ಸಮಾಜಸೇವಕ ಇಕ್ಬಾಲ್ ಮನ್ನಾ ಭಾಗವಹಿಸಿದ್ದರು. ಮಾಹಿತಿ ಕೇಂದ್ರದ ಉಸ್ತುವಾರಿಗಳಾದ ಮುಹಮ್ಮದ್ ಮರಕಡ ಹಾಗೂ ಮಸೀದಿಯ ಕಾರ್ಯಕಾರಿ ಸದಸ್ಯರು, ಪರಿಸರದ ಗಣ್ಯರು, ಆಸುಪಾಸಿನ ನಿವಾಸಿಗಳು ಹಾಗೂ ಮಕ್ಕಳು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.